Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver
    Facebook Twitter Instagram
    Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver
    • STATE
    • KARNATAKA
    • INDIA
    • WORLD
    • SPORTS
      • CRICKET
      • OTHER SPORTS
    • FILM
      • SANDALWOOD
      • BOLLYWOOD
      • OTHER FILM
    • LIFE STYLE
      • BEAUTY TIPS
    • BUSINESS
    • JOBS
    • CORONA VIRUS
    • AUTOMOBILE
      • BIKE-REVIEWS
      • CAR-REVIEWS
    Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver
    Home»KARNATAKA»40 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಚಾಲನೆ, 40 ತಿಂಗಳಲ್ಲಿ ಪೂರ್ಣ – ಪ್ರಧಾನಿ ನರೇಂದ್ರ ಮೋದಿ
    KARNATAKA

    40 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಚಾಲನೆ, 40 ತಿಂಗಳಲ್ಲಿ ಪೂರ್ಣ – ಪ್ರಧಾನಿ ನರೇಂದ್ರ ಮೋದಿ

    By KNN IT TEAMJune 20, 7:10 pm

    ಬೆಂಗಳೂರು : ಕಳೆದ ನಲವತ್ತು ವರ್ಷಗಳಿಂದ ಅಂದರೆ ಎಂಬಬತ್ತರ ದಶಕದಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಚಾಲನೆ ನೀಡುತ್ತಿರುವ ತಾವು ಅವುಗಳನ್ನು ಮುಂದಿನ ನಲವತ್ತು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲು ಚಿಂತನೆ ನಡೆಸಿರುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ( Prime Minister Narendra Modi ) ಅವರು ಇಲ್ಲಿ ಇಂದು ಪ್ರಕಟಿಸಿದರು.

    ನಗರದ ಹೊರವಲಯದ ಕೊಮ್ಮಘಟ್ಟ ನೈಸ್ ಮೈದಾನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಮೂವತ್ತಮೂರು ಸಾವಿರ ಕೋಟಿ ರೋ ಮೊತ್ತದ ವಿವಿಧ ಆಭಿವೃಧ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ತಮ್ಮ ಸರ್ಕಾರದ ಹಲವು ಯೋಜನೆಗಳು ಯುವ ಜನತೆಯ ಕನಸುಗಳನ್ನು ಅರಳಿಸುತ್ತಿದೆ. ಈ ಮಹಾನಗರದ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಮೆಟ್ರೋ ರೈಲು ಯೋಜನೆ, ಉಪ ನಗರ ರೈಲ್ವೇ ಯೋಜನೆ, ವರ್ತುಲ ರಸ್ತೆ ನಿರ್ಮಾಣದಂತಹ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಗಳು ಅನುಷ್ಠಾನಕ್ಕೆ ಬಂದಲ್ಲಿ ಸಂಚಾರ ದಟ್ಟನೆ ಪ್ರಯಾಣದ ಅವಧಿ ಕಡಿತಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿವೆ. ವಾಹನ ದಟ್ಟಣೆ ಕಡಿಮಎ ಮಾಡುವ, ಸುಗಮ ಮತ್ತು ಸುಲಭ ಸಂಚಾರಕ್ಕೆ ಕ್ರಮವಹಿಸುವ ಯೋಜನೆಗಳು ನಲವತ್ತು ವರ್ಷಗಳ ಹಿಂದೆಯೇ ಜಾರಿಯಾಗಿದ್ದರೆ, ಬೆಂಗಳೂರಿನ ಸಂಪರ್ಕ ವ್ಯವಸ್ಥೆ ಮೇಲೆ ಇಷ್ಟು ಒತ್ತಡ ಬೀಳುತ್ತಿರಲಿಲ್ಲ. ಹದಿನಾರು ವರ್ಷಗಳ ಕಾಲ ಈ ಯೋಜನೆಗಳು ಕಡತಗಳಲ್ಲಿಯೇ ಓಡಾಡಿವೆ, ಒದ್ದಾಡಿವೆ . ತಮ್ಮ ಸರ್ಕಾರದ ಕ್ರಮ ಹಾಗೂ ಉಪಕ್ರಮಗಳಿಂದ ರಾಷ್ಟ್ರದಲ್ಲಿ ರೈಲ್ವೆ, ರಸ್ತೆ, ಬಂದರು ಹಾಗೂ ವಿಮಾನ ನಿಲ್ದಾಣ ನಿರ್ಮಾಣದ ಈ ಬಹು ಮಾದರಿ ಸಂಪರ್ಕದ ವ್ಯವಸ್ಥೆಗೆ ಇದೀಗ ಚಾಲನೆ ದೊರೆತಿರುವ ಹಿನ್ನೆಲೆಯಲ್ಲಿ ಇಪ್ಪತ್ತೊಂದನೆಯ ಶತಮಾನದ ಅಂತ್ಯಕ್ಕೆ ಬೆಂಗಳೂರಿನ ಅಭಿವೃದ್ಧಿಯು ಯಶೋಗಾಥೆಯಾಗಲಿದೆ ಎಂದು ಬಣ್ಣಿಸಿದರು.

    BREAKING NEWS: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್ | Sonia Gandhi discharged

    ಕರ್ನಾಟಕದ ವಿಕಾಸ ಯಾತ್ರೆಯ ವೇಗವನ್ನು ವೃದ್ಧಿಸುವ ಕಾರ್ಯಕ್ಕೆ ಇದೀಗ ಚಾಲನೆ ನೀಡಲಾಗಿದೆ. ಕೊಂಕಣ ರೈಲ್ವೇ ಮಾರ್ಗದ ಶೇಕಡಾ 100 ರಷ್ಟು ವಿದ್ಯುದ್ದೀಕರಣ ಯೋಜನೆಗಳು ಪೂರ್ಣಗೊಳಿಸಲಾಗಿದೆ. ಕರ್ನಾಟಕದಲ್ಲಿ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಮತ್ತು ಏಳು ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ಇದರಿಂದ ಕರ್ನಾಟಕದ ಯುವ ಜನರು, ಮಧ್ಯಮ ವರ್ಗದವರು, ರೈತರು, ಕಾರ್ಮಿಕ ವರ್ಗದವರು ಹಾಗೂ ಉದ್ಯಮಿಗಳಿಗೆ ಮತ್ತಷ್ಟು ಸೌಲಭ್ಯ ಹಾಗೂ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಪ್ರಧಾನಿ ಭರವಸೆಯ ಮಾತುಗಳನ್ನಾಡಿದರು.

    ರಾಷ್ಟ್ರದಲ್ಲಿಯೇ ಬೆಂಗಳೂರು ಕನಸುಗಳನ್ನು ಸಾಕಾರಗೊಳಿಸುವ ನಗರವಾಗಿ ಹೊರಹೊಮ್ಮಿದೆ. ಉದ್ಯಾನ ನಗರಿಯು ದೇಶದ ಲಕ್ಷಾಂತರ ಯುವಜನರಲ್ಲಿ ಕನಸುಗಳನ್ನು ಅರಳಿಸುತ್ತಿದೆ. ಬೆಂಗಳೂರು ನಗರದ ಸಾಮರ್ಥ್ಯ ಹೆಚ್ಚಿಸಲು ಡಬಲ್ ಇಂಜಿನ್ ( ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ) ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಇಂದು ಹಲವಾರು ಮಹತ್ವಾಕಾಂಕ್ಷೀ ಯೋಜನೆಗಳಿಗೆ ಚಾಲನೆ ನೀಡುವ ಸದವಕಾಶ ತಮಗೆ ದೊರೆತಿದೆ. ತಮ್ಮ ಜೀವನದ ಪ್ರತಿ ಕ್ಷಣವನ್ನೂ ಕೂಡಾ ಜನರ ಸೇವೆಗೆ ಮೀಸಲಿರಿಸಿದ್ದೇನೆ ಎಂದು ಮೋದಿ ಭಾವುಕರಾಗಿ ನುಡಿದರು.

    ದಾವಣಗೆರೆಯಲ್ಲಿ ಪರಿಹಾರ ಕೊಡದ ನಾಲ್ಕು ಸಾರಿಗೆ ಬಸ್ ಜಪ್ತಿ

    ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ದೊರೆಯುವ ಸೇವೆಗಳಿಗೆ ಸರಿ ಸಮಾನಾಗಿ ಇದೀಗ ಭಾರತೀಯ ರೈಲ್ವೆ ಕೂಡಾ ಸೌಲಭ್ಯಗಳನ್ನು ವಿಸ್ತರಿಸುತ್ತಿದೆ. ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಲ್ಲಿರುವ ಸರ್.ಎಂ. ವಿಶ್ವೇಶ್ವರಯ್ಯ ಹವಾನಿಯಂತ್ರಿತ ರೈಲ್ವೆ ನಿಲ್ದಾಣವೇ ಸಾಕ್ಷಿಯಾಗಿದೆ. ಇದು ಹವಾನಿಯಂತ್ರಿತ ಸೌಲಭ್ಯ ಹೊಂದಿದ ರಾಷ್ಟ್ರದ ಮೊದಲನೇ ರೈಲು ನಿಲ್ದಾಣವಾಗಿದೆ. ಇವೆಲ್ಲವನ್ನೂ ಕಂಡಾಗ ದೇಶವು ಅಭಿವೃದ್ಧಿ ಪಥದತ್ತ ಸಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. . ಬೆಂಗಳೂರಿನ ಈ ರೈಲು ನಿಲ್ದಾಣವು ಪ್ರವಾಸೀ ತಾಣವಾಗಉತ್ತಿದೆ. ಈ ರೈಲು ನಿಲ್ದಾಣವನ್ನು ನೋಡಲು ಪ್ರವಾಸಿಗರು ನೂರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಯುವ ಜನರು ರೈಲ್ವೆ ನಿಲ್ದಾಣದಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನ ಈ ಯಶೋಗಾಥೆ ಭಾರತಕ್ಕೆ ಮಾದರಿಯಾಗಿದೆ ಎಂದು ಪ್ರಧಾನ ಮಂತ್ರಿ ಹೆಮ್ಮೆಯಿಂದ ಹೇಳಿದರು.

    ಭಾರತದಲ್ಲಿ ಕೃಷಿ ನಂತರದ ಸ್ಥಾನವನ್ನು ಸಣ್ಣ ಮತ್ತು ಮಧ್ಯಗಮ ಕೈಗಾರಿಕೆಗಳು ಹೊಂದಿವೆ. ಹೆಚ್ಚಿನ ಉದ್ಯೋಗ ಹಾಗೂ ಆರ್ಥಿಕತೆಗೆ ಇವುಗಳ ಕೊಡುಗೆ ಮಹತ್ವದ್ದಾಗಿದೆ. ಪ್ರಸ್ತುತ 200 ಕೋಟಿ ರೂ. ವರೆಗಿನ ಕಾಮಗಾರಿಗಳ ಅನುಷ್ಟಾನದಲ್ಲಿ ಶೇಕಡಾ 25 ರಷ್ಟು ಸಾಮಾಗ್ರಿಗಳನ್ನು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಂದ ಖರೀದಿಸಿ ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಒತ್ತು ನೀಡಲು ಅವಕಾಶ ನೀಡಲಾಗಿದೆ. ಇದರ ಲಾಭವನ್ನು 45 ಲಕ್ಷಕ್ಕೂ ಅಧಿಕ ವ್ಯಾಪಾರಿಗಳು ಪಡೆದಿದ್ದಾರೆ. 2014 ರ ನಂತರ ದೇಶದಲ್ಲಿ ಹೊಸ ಕಂಪನಿಗಳು ಬಂಡವಾಳ ಹೂಡಿಕೆ ಮಾಡಿವೆ. ಡ್ರೋನ್ ನಿಂದ ವಿಮಾನ ತಯಾರಿಕೆವರೆಗೆ ಭಾರತವು ಸ್ವಾವಲಂಬಿಯಾಗುತ್ತಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಂಪೂರ್ಣ ನೆರವು ನೀಡುತ್ತಿದೆ ಎಂದು ಮೋದಿ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದರು.

    BIG NEWS: ಪ್ರಧಾನಮಂತ್ರಿಗಳಿಂದ 33 ಸಾವಿರ ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ – ಸಿಎಂ ಬೊಮ್ಮಾಯಿ

    ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ಪ್ರಧಾನಿ 

    ಈ ಮುನ್ನ, “ ಕರುನಾಡ ಜನತೆಗೆ ನನ್ನ ಪ್ರೀತಿ ನಮಸ್ಕಾರಗಳು, ಬೆಂಗಳೂರಿನ ಜನತೆಗೆ ವಿಶೇಷವಾದ ನಮಸ್ಕಾರಗಳು. ಕರ್ನಾಟಕ ರಾಜ್ಯದ ಜನತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಮರ್ಪಿಸುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ ” ಎಂದು ನರೇಂದ್ರ ಮೋದಿ ಅವರು ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದಾಗ ಸಭೆಯಲ್ಲಿ ಒಂದೆಡೆ ಕರತಾಡನದ ಸದ್ದು ಮತ್ತೊಂದೆಡೆ ಹರ್ಷೋದ್ಗಾರದ ಶಬ್ದ ಮುಗಿಲು ಮುಟ್ಟಿತ್ತು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲೇ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಈ ಯೋಜನೆಗಳು ಅನುಷ್ಠಾನಕ್ಕೆ ಬಂದಲ್ಲಿ, ದೇಶೀಯ ಉತ್ಪನ್ನದ ಪ್ರಮಾಣ ಶೇಕಡಾ ಎರಡಷ್ಟು ಏರಿಕೆ ಆಗಲಿದೆ.

    ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ದೇಶವನ್ನು 2047 ರ ಹೊತ್ತಿಗೆ ಜಗತ್ತಿನಲ್ಲಿಯೇ ಶ್ರೇಷ್ಠ ರಾಷ್ಟ್ರವಾಗಿಸುವ ಚಿಂತನೆ, ಕಾರ್ಯಸೂಚಿಗೆ ಗತಿಶಕ್ತಿ ನೀಡಿದ್ದಾರೆ. ಜಲಜೀವನ ಮಿಷನ್ ನ ಮನೆ ಮನೆಗೆ ಗಂಗೆ ಯೋಜನೆಯಡಿ ನಗರ ಮತ್ತು ಗ್ರಾಮೀಣ ಭಾಗದ 48 ಲಕ್ಷ ಮನೆಗಳಿಗೆ ನಲ್ಲಿಗಳ ಮೂಲಕ ಕುಡಿಯುವ ನೀರು ಪೂರೈಸುವ ಮನೆ ಮನೆಗೆ ಗಂಗೆ ಯೋಜನೆ ಅನುಷ್ಠಾನವಾಗುತ್ತಿದೆ. ಅಲ್ಲದೆ, 2024 ರ ವೇಳೆಗೆ ರಾಜ್ಯದ ಪ್ರತಿಯೊಂದು ಮನೆಗೆ ನಲ್ಲಿ ಸಂಪರ್ಕ ಸಾಧ್ಯವಾಗಲಿದೆ. ನವಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣಕ್ಕೆ ಇಂದು ಮುನ್ನುಡಿ ಬರೆಯಲಾಗಿದೆ ಎಂದರು.

    ಶಿವಮೊಗ್ಗ: ಜಿಲ್ಲಾ ‘ಬ್ರಾಹ್ಮಣ ವಿದ್ಯಾರ್ಥಿ ನಿಲಯ’ದಲ್ಲಿ ಅವ್ಯವಸ್ಥೆಯ ಆಗರ, ಗಬ್ಬುನಾತ ಬಡಿಯುವ ‘ಅಡುಗೆ ಕೋಣೆ’

    ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು 20 ವರ್ಷಗಳ ಅಧಿಕಾರ ಪೂರ್ಣಗೊಳಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ತಮ್ಮ ಸರ್ಕಾರ ಬಡವರಿಗೆ ಸಮರ್ಪಿತ ಎಂದು ಹೇಳಿದ್ದರು. ಪ್ರಧಾನಮಂತ್ರಿ ಆವಾಸ್ ಯೋಜನೆ ಅನುಷ್ಠಾನಕ್ಕೆ ತಂದು ಬಡವರಿಗೆ ಸೂರು ಕಲ್ಪಿಸಲಾಗಿದೆ.

    ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ 80 ಕೋಟಿ ಜನರಿಗೆ ಉಚಿತ ಪಡಿತರ ಯೋಜನೆ ಜಾರಿಗೊಳಿಸಲಾಗಿದೆ. 210 ಕೋಟಿ ಡೋಸ್ಗೂಧ ಅಧಿಕ ಕೋವಿಡ್ ನಿರೋಧಕ ಲಸಿಕೆ ನೀಡಲಾಗಿದೆ. ಉಜ್ವಲ ಯೋಜನೆಯಡಿ 34 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ, ಜಲಜೀವನ ಮಿಷನ್ ಯೋಜನೆಯಡಿ 48 ಲಕ್ಷ ಮನೆಗಳಿಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸುವುದು. ಒಳಗೊಂಡಂತೆ ಹಲವು ಯೋಜನೆ ಜಾರಿಗೆ ತರಲಾಗಿದೆ. ಬಡತನ ರೇಖೆಗಿಂತಲೂ ಕೆಳಗಿರುವ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸು8ವ ಉಜ್ವಲ ಯೋಜನೆಯ ಅನುಷ್ಠಾನದಿಂದ ಕೋಟ್ಯಂತರ ಮಹಿಳೆಯರಿಗೆ ನೆರವಾಗಿದೆ. ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಎಂಟು ವರ್ಷಗಳ ಯಶಸ್ವೀ ಆಡಳಿತವನ್ನು ಪೂರ್ಣಗೊಳಿಸಿದ್ದಾರೆ ಎಂದರು.

    BREAKING NEWS: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್ | Sonia Gandhi discharged

    ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೊಹ್ಲೋಟ್, ಸಂಸದರಾದ ಪಿ.ಸಿ.ಮೋಹನ್, ಡಿ.ವಿ.ಸದಾನಂದಗೌಡ, ಎಲ್.ಎಸ್. ತೇಜಸ್ವಿ ಸೂರ್ಯ, ವಸತಿ ಸಚಿವ ವಿ.ಸೋಮಣ್ಣ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರೂ ಸೇಂದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

    ಉದ್ಘಾಟನೆ ಮತ್ತು ಶಂಕುಸ್ಥಾಪನೆಯಾದ ಯೋಜನೆಗಳು 

    ಬೆಂಗಳೂರು ಉಪನಗರ ರೈಲ್ವೆ ಯೋಜನೆ 125 ಕಿ.ಮೀ ಮಾರ್ಗದ ಯಲಹಂಕ ಪೆನುಕೊಂಡ ರೈಲ್ವೇ ಜೋಡಿ ಮಾರ್ಗ, 96 ಕಿಮೀ ಅರಸೀಕರೆ – ತುಮಕೂರು ರೈಲ್ವೆ ಜೋಡಿ ಮಾರ್ಗ, 740 ಕಿ.ಮೀ ಕೊಂಕಣ ರೈಲ್ವೆ ಮಾರ್ಗ ಶೇಕಡಾ 100 ರಷ್ಟು ವಿದ್ಯುದ್ದೀಕರಣ, ಬೆಂಗಳೂರು ಕಂಟೋನ್ಮೆಂನಟ್ ಹಾಗೂ ಯಶವಂತಪುರ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ , ಎರಡು ಪ್ಯಾಕೇಜ್ ಗಳಲ್ಲಿ ಬೆಂಗಳೂರು ವರ್ತುಲ ರಸ್ತೆ ನೆಲಮಂಗಲ-ತುಮಕೂರು ರಾಷ್ಟ್ರೀಯ ಹೆದ್ದಾರಿ ಷಟ್ಪಥಗೊಳಿಸುವ ಯೋಜನೆ. ರಾಷ್ಟ್ರೀಯ ಹೆದ್ದಾರಿ 73 ರ ಪೂಂಜಾಲಕಟ್ಟೆಯಿಂದ ಚಾರ್ಮಾಡಿ ಭಾಗದವರೆಗೂ ರಸ್ತೆ ಅಗಲೀಕರಣ, ರಾಷ್ಟ್ರೀಯ ಹೆದ್ದಾರಿ 69 ರ ಮಧುಗಿರಿ-ಗೌರಿಬಿದನೂರು-ಚಿಕ್ಕಬಳ್ಳಾಪುರ ರಸ್ತೆಯ ಅಗಲೀಕರಣ ಹಾಗೂ ಉನ್ನತೀಕರಣ. 1800 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ ಅಭಿವೃದ್ಧಿಗೆ ಪ್ರಧಾನಿ ಚಾಲನೆ ನೀಡಿದರು.

    ಇದೇ ಸಂದರ್ಭದಲ್ಲಿ ಬೆಂಗಳೂರು ಉಪ ನಗರ ರೈಲು ಯೋಜನೆಯ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು ಅಲ್ಲದೆ, ತುಮಕೂರು, ಅರಸೀಕೆರೆ, ಯಲಹಂಕ, ರತ್ನಗಿರಿ, ಮಡಗಾಂವ್ ಮತ್ತು ಉಡುಪಿಗೆ ಹೊಸ ರೈಲು ಸೇವೆಗೆ ವಿಡಿಯೋ ಲಿಂಕ್ ಮೂಲಕ ಹಸಿರು ನಿಶಾನೆಯನ್ನು ತೋರಿದರು.


    breaking news kannada latest news kannada news kannada news live kannada news now kannada online news kannadanews kannadanewsnow dot com kannadanewsnow.com kannadanewsnowdotcom karnataka latest news karnataka news latest news
    best web service company
    Share. Facebook Twitter LinkedIn WhatsApp Email

    Related Posts

    BIGG NEWS : ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ : ಫೋಟೋ ಶೂಟ್ ಮಾಡುವಾಗ ಮೂವರು ವಿದ್ಯಾರ್ಥಿಗಳು ನೀರುಪಾಲು

    April 02, 6:54 am

    BIGG NEWS : ಬೆಂಗಳೂರಿನಲ್ಲಿ `IPL’ ಪಂದ್ಯಾವಳಿ : ರಾತ್ರಿ 1 ಗಂಟೆವರೆಗೆ ಮೆಟ್ರೋ ಸಂಚಾರ ವಿಸ್ತರಣೆ

    April 02, 6:43 am

    BIGG NEWS : ರಾಜ್ಯಕ್ಕೆ `ಹೀಟ್ ವೇವ್’ ಆತಂಕ : ಸುಡುಬಿಸಿಲಿಗೆ ಜನರು ತತ್ತರ!

    April 02, 6:29 am
    Recent News

    BIG NEWS: ಭಾರತದಲ್ಲಿ 6.8 ಲಕ್ಷಕ್ಕೂ ಹೆಚ್ಚು ʻTwitterʼ ಖಾತೆಗಳು ಬ್ಯಾನ್, ಕಾರಣ? | Twitter Ban

    April 02, 6:56 am

    BIGG NEWS : ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ : ಫೋಟೋ ಶೂಟ್ ಮಾಡುವಾಗ ಮೂವರು ವಿದ್ಯಾರ್ಥಿಗಳು ನೀರುಪಾಲು

    April 02, 6:54 am

    BIG NEWS : UPI ವ್ಯವಹಾರದಲ್ಲಿ ದಾಖಲೆ ಏರಿಕೆ; ಮಾರ್ಚ್‌ನಲ್ಲಿ 14 ಲಕ್ಷ ಕೋಟಿ ರೂ. ವಹಿವಾಟು | UPI transactions

    April 02, 6:47 am

    BIGG NEWS : ಬೆಂಗಳೂರಿನಲ್ಲಿ `IPL’ ಪಂದ್ಯಾವಳಿ : ರಾತ್ರಿ 1 ಗಂಟೆವರೆಗೆ ಮೆಟ್ರೋ ಸಂಚಾರ ವಿಸ್ತರಣೆ

    April 02, 6:43 am
    State News
    KARNATAKA

    BIGG NEWS : ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ : ಫೋಟೋ ಶೂಟ್ ಮಾಡುವಾಗ ಮೂವರು ವಿದ್ಯಾರ್ಥಿಗಳು ನೀರುಪಾಲು

    By kannadanewsliveApril 02, 6:54 am0

    ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಫೋಟೋ ಶೂಟ್ ಮಾಡುವಾಗ ಜಲಾಶಯದಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ…

    BIGG NEWS : ಬೆಂಗಳೂರಿನಲ್ಲಿ `IPL’ ಪಂದ್ಯಾವಳಿ : ರಾತ್ರಿ 1 ಗಂಟೆವರೆಗೆ ಮೆಟ್ರೋ ಸಂಚಾರ ವಿಸ್ತರಣೆ

    April 02, 6:43 am

    BIGG NEWS : ರಾಜ್ಯಕ್ಕೆ `ಹೀಟ್ ವೇವ್’ ಆತಂಕ : ಸುಡುಬಿಸಿಲಿಗೆ ಜನರು ತತ್ತರ!

    April 02, 6:29 am

    BIGG NEWS : ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ : ಒಂದೇ ದಿನ 247 ಜನರಲ್ಲಿ ಸೋಂಕು ಪತ್ತೆ!

    April 02, 6:14 am

    kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

    Quick Links
    • State
    • Karnataka
    • India
    • World
    • Sports
    • Film
    • Lifestyle
    • Business
    • Jobs
    • Corona Virus
    • Automobile
    contact us

    kannadanewsnow@gmail.com

    FOLLOW US

    breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

    • Home
    • Lifestyle
    • Buy Now
    Copyright © 2023 | All Right Reserved | kannadanewsnow.com
    Digital Partner Blueline Computers

    Type above and press Enter to search. Press Esc to cancel.