ಬೆಂಗಳೂರು: ನಗರದಲ್ಲಿನ ಪ್ರೀ ಸ್ಕೂಲ್ ಒಂದರಲ್ಲಿ ನಡೆದಂತ ನಿರ್ಲಕ್ಷ್ಯ ಘಟನೆಯಿಂದಾಗಿ 4 ವರ್ಷದ ಪುಟ್ಟ ಕಂದಮ್ಮ ಜೀವನ್ಮರಣ ಹೋರಾಟ ನಡೆಸುತ್ತಿರುವಂತೆ ಆಗಿತ್ತು. ಇದೀಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಪುಟ್ಟ ಕಂದಮ್ಮ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ಬೆಂಗಳೂರಿನ ಹೆಣ್ಣೂರಿನ ಚೆಲ್ಲಕೆರೆಯಲ್ಲಿನ ಡೆಲ್ಲಿ ಪ್ರೀ ಸ್ಕೂಲ್ ನಲ್ಲಿ 4 ವರ್ಷದ ಜಿನಾ ಓದುತ್ತಿದ್ದಳು. ಜನವರಿ.22ರಂದು 3ನೇ ಮಹಡಿಯಿಂದ ಬಿದ್ದಿದ್ದಂತ ಜಿನಾಗೆ ತಲೆಗೆ ತೀವ್ರವಾಗಿ ಪೆಟ್ಟಾಗಿ ಗಾಯ ಕೂಡ ಆಗಿತ್ತು.

ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವಂತ 4 ವರ್ಷದ ಜಿನಾ ಸ್ಥಿತಿ ಚಿಂತಾಜನಕವಾಗಿರೋದಾಗಿ ನಿನ್ನೆ ತಿಳಿದು ಬಂದಿತ್ತು. ಇದೀಗ 4 ವರ್ಷದ ಪುಟ್ಟ ಬಾಲಕಿ ಜಿನಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಹೀಗಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಅಂದಹಾಗೇ ಜಿನಾ ಇಷ್ಟು ತೀವ್ರವಾಗಿ ಗಾಯಗೊಂಡರೂ ಹೆಣ್ಣೂರು ಠಾಣೆಯ ಪೊಲೀಸರು ಮಾತ್ರ ಎಫ್ಐಆರ್ ದಾಖಲಿಸಿ, ಪ್ರೀ ಸ್ಕೂಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋ ಬದಲಾಗಿ, ಎನ್ ಸಿಆರ್ ಹಾಕಿ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.

‘ಆಫರ್’ಗಳ ಬಲೆಗೆ ಬೀಳ್ಬೇಡಿ, ಸ್ಮಾರ್ಟ್ ಆಟವಾಡಿ, ಸುರಕ್ಷಿತವಾಗಿರಿ’ : ಗೇಮಿಂಗ್ ಪ್ರಿಯರಿಗೆ ‘ಕೇಂದ್ರ ಸರ್ಕಾರ’ ಎಚ್ಚರಿಕೆ

BIG NEWS: ‘ರಾಜ್ಯ ಸರ್ಕಾರಿ ನೌಕರ’ರಿಗೆ ಮತ್ತೊಂದು ಗುಡ್‌ನ್ಯೂಸ್‌: ‘ಪ್ರಭಾರ ಭತ್ಯೆ’ ಹೆಚ್ಚಿಸಿ ಸರ್ಕಾರ ಆದೇಶ

Share.
Exit mobile version