ಅಯೋಧ್ಯೆ: ಇಲ್ಲಿನ ರಾಮಜನ್ಮಭೂಮಿ ಸ್ಥಳದಲ್ಲಿ ಭದ್ರತೆಯ ಭಾಗವಾಗಿ ನಿಯೋಜಿಸಲಾಗಿದ್ದ ನಾಲ್ವರು ಮಹಿಳಾ ಪೊಲೀಸ್ ಪೇದೆಗಳು ಭೋಜ್‌ಪುರಿ ಹಾಡಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ‌ಕಾಣಿಸಿಕೊಂಡ ಬೆನ್ನಲ್ಲೇ, ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅಮಾನತುಗೊಂಡಿರುವ ಕಾನ್‌ಸ್ಟೆಬಲ್‌ಗಳು ಸಮವಸ್ತ್ರದಲ್ಲಿ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮುನಿರಾಜ್ ಜಿ ಅವರು ಗುರುವಾರ ಹೆಚ್ಚುವರಿ ಎಸ್‌ಪಿ (ಭದ್ರತೆ) ಪಂಕಜ್ ಪಾಂಡೆ ಸಲ್ಲಿಸಿದ ತನಿಖಾ ವರದಿಯನ್ನು ಆಧರಿಸಿ ಕಾನ್‌ಸ್ಟೆಬಲ್‌ಗಳಾದ ಕವಿತಾ ಪಟೇಲ್, ಕಾಮಿನಿ ಕುಶ್ವಾಹಾ, ಕಾಶಿಶ್ ಸಾಹ್ನಿ ಮತ್ತು ಸಂಧ್ಯಾ ಸಿಂಗ್ ಅವರನ್ನು ಅಮಾನತುಗೊಳಿಸಿದ್ದಾರೆ.

ಈ ಮನೆಯ ಅರ್ಧ ಭಾಗ ತೆಲಂಗಾಣ, ಇನ್ನರ್ಧ ಮಹಾರಾಷ್ಟ್ರದಲ್ಲಿದೆ!… ಹೇಗಿದು ಸಾಧ್ಯ? ಇಲ್ಲಿದೆ ವಿಶೀಷ ಮಾಹಿತಿ

‘ಮೊಟ್ಟೆಯ ಹಳದಿ ಲೋಳೆ’ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ಈ ಬಗ್ಗೆ ‘ಕರಾಳ ಸತ್ಯ ಬಿಚ್ಚಿಟ್ಟ ಆರೋಗ್ಯ ತಜ್ಞರು’ | Egg Benefits

ಈ ಮನೆಯ ಅರ್ಧ ಭಾಗ ತೆಲಂಗಾಣ, ಇನ್ನರ್ಧ ಮಹಾರಾಷ್ಟ್ರದಲ್ಲಿದೆ!… ಹೇಗಿದು ಸಾಧ್ಯ? ಇಲ್ಲಿದೆ ವಿಶೀಷ ಮಾಹಿತಿ

Share.
Exit mobile version