ಕಠ್ಮಂಡು (ನೇಪಾಳ): ಇಂದು ಮುಂಜಾನೆ ಮಧ್ಯ ನೇಪಾಳದಲ್ಲಿ 5.0 ಕ್ಕಿಂತ ಕಡಿಮೆ ಪ್ರಮಾಣದ ಎರಡು ಲಘು ಭೂಕಂಪ(earthquakes)ಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರವು ತಿಳಿಸಿದೆ.
ಮಾಹಿತಿ ಪ್ರಕಾರ, ಇಂದು ಬೆಳಗ್ಗೆ 3:56 AM (NST) ಕ್ಕೆ ನೇಪಾಳದ ಕಸ್ಕಿ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 4.9 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಿಂದಾಗಿ ಜಿಲ್ಲೆಯ ಸುತ್ತಮುತ್ತಲ ಪ್ರದೇಶದ ಜನರಿಗೆ ಕಂಪನದ ಅನುಭವವಾಗಿದೆ ಎನ್ನಲಾಗಿದೆ.
ಇನ್ನೂ, ಬೆಳಗ್ಗೆ 7:22 AM (NST) ಕ್ಕೆ ಗೂರ್ಖಾ ಜಿಲ್ಲೆಯ ಥುಮಿಯಲ್ಲಿ 4.1 ತೀವ್ರತೆಯ ಭೂಕಂಪವಾಗಿದೆ ಎಂದು ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಮತ್ತು ರಿಸರ್ಚ್ ಸೆಂಟರ್ ತಿಳಿಸಿದೆ. ಇದರಿಂದಾಗಿ ಯಾವುದೇ ಹಾನಿ ಅಥವಾ ಸಾವು ನೋವುಗಳ ವರದಿಯಾಗಿಲ್ಲ.
BREAKING NEWS : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ : 24 ಗಂಟೆಯಲ್ಲಿ 13,313 ಕೇಸ್ ಪತ್ತೆ
Breaking news: ಅಫ್ಘಾನಿಸ್ತಾನದಲ್ಲಿ ಇಂದು ಮತ್ತೆ ಪ್ರಬಲ ಭೂಕಂಪ: 4.3 ತೀವ್ರತೆ ದಾಖಲು