ಪಂಜಾಬ್ : ಹಳಿ ಮೇಲೆ ಆಟವಾಡುತ್ತಿದ್ದ ಮಕ್ಕಳಿಗೆ ರೈಲು ಡಿಕ್ಕಿ: ಮೂವರು ಸಾವು

ರೂಪನಗರ (ಪಂಜಾಬ್): ಶ್ರೀ ಕಿರಾತ್‌ಪುರ ಸಾಹಿಬ್ ಬಳಿ ಭಾನುವಾರ ಮೂವರು ಮಕ್ಕಳು ಪ್ಯಾಸೆಂಜರ್ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಘಟನೆಯ ಕುರಿತು ಪಂಜಾಬ್ ಸರ್ಕಾರ ತನಿಖೆಗೆ ಆದೇಶಿಸಿದೆ. ಸಟ್ಲೆಜ್ ನದಿಯ ಸೇತುವೆಯ ಸಮೀಪವಿರುವ ರೈಲ್ವೇ ಹಳಿಯ ಬಳಿ ವಲಸೆ ಕಾರ್ಮಿಕರ ನಾಲ್ವರು ಮಕ್ಕಳು ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ನಾಲ್ಕನೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಮಕ್ಕಳು 7 ರಿಂದ 11 ವರ್ಷದೊಳಗಿನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಜಾಬ್ ಶಾಲಾ ಶಿಕ್ಷಣ ಸಚಿವ … Continue reading ಪಂಜಾಬ್ : ಹಳಿ ಮೇಲೆ ಆಟವಾಡುತ್ತಿದ್ದ ಮಕ್ಕಳಿಗೆ ರೈಲು ಡಿಕ್ಕಿ: ಮೂವರು ಸಾವು