ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ಘಟಕದಲ್ಲಿ ಹೊಸ ಪೊಲೀಸ್ ಠಾಣೆಗನ್ನು ಸೃಜಿಸೋದಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದಲ್ಲದೇ ಹೊಸದಾಗಿ 2454 ಪೊಲೀಸ್ ಹುದ್ದೆಗಳ ನೇಮಕಾತಿಗೂ ಮಂಜೂರಾತಿ ನೀಡಿದೆ. ಈ ಮೂಲಕ ಬೆಂಗಳೂರು ನಗರ ಪೊಲೀಸ್ ಬಲವರ್ಧನೆಗೆ ಮಹತ್ವದ ಕ್ರಮವನ್ನು ಕೈಗೊಂಡಿದೆ.
ಈ ಸಂಬಂಧ ನಡವಳಿಯನ್ನು ಹೊರಡಿಸಿರುವಂತ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು, ಬೆಂಗಳೂರಿನಲ್ಲಿ ಹೊಸದಾಗಿ 5 ಸಂಚಾರ ಪೊಲೀಸ್ ಠಾಣೆಗಳನ್ನು, 6 ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು 2454 ಹುದ್ದೆಗಳನ್ನು ಹೊಸದಾಗಿ 2 ಹಂತಗಳಲ್ಲಿ ಸೃಜಿಸಲು ಆಡಳಿತಾತ್ಮಕ ಅನುಮೋದನೆ ನೀಡಿರೋದಾಗಿ ತಿಳಿಸಿದ್ದಾರೆ.
ಹೀಗೆವೆ ಎರಡು ಹೊಸ ಸಂಚಾರಿ ಪೊಲೀಸ್ ಠಾಣೆಗಳು
- ಚಿಕ್ಕಬಾಣಾವರ ಉತ್ತರ ಸಂಚಾರ ಪೊಲೀಸ್ ಠಾಣೆ
- ಜ್ಞಾನಭಾರತಿ ಸಂಚಾರ ಠಾಣೆ.
ಹೀಗಿವೆ 6 ಹೊಸ ಮಹಿಳಾ ಪೊಲೀಸ್ ಠಾಣೆಗಳು
- ಮಹಿಳಾ ಪಿಎಸ್ ಉತ್ತರ
- ಮಹಿಳಾ ಪಿಎಸ್ ಸೆಂಟ್ರಲ್
- ಮಹಿಳಾ ಪಿಎಸ್ ಪಶ್ಚಿಮ
- ಮಹಿಳಾ ಪಿಎಸ್ ಈಶಾನ್ಯ
- ಮಹಿಳಾ ಪಿಎಸ್ ಆಗ್ನೇಯ
- ಮಹಿಳಾ ಪಿಎಸ್ ವೈಟ್ ಫೀಲ್ಡ್.
ಈ ಮೇಲ್ಕಂಡ ಹೊಸ ಠಾಣೆಗಳಿಗೆ ಆರ್ಥಿಕ ವರ್ಷ 2023-24ನೇ ಸಾಲಿಗೆ 1226 ಪೊಲೀಸ್ ಹುದ್ದೆಗಳ ಭರ್ತಿ ಹಾಗೂ ಆರ್ಥಿಕ ವರ್ಷ 2024-25ನೇ ಸಾಲಿಗೆ 1228 ಸೇರಿದಂತೆ ಒಟ್ಟು 2454 ಹುದ್ದೆಗಳ ಭರ್ತಿಗೆ ಅನುಮೋದನೆಯನ್ನು ನೀಡಲಾಗಿದೆ.
ಇನ್ನೂ ಪಿಎಸ್ಐ ಹಾಗೂ ಪಿಸಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ 2 ಹಂತದಲ್ಲಿ ಭರ್ತಿ ಮಾಡಲು ಸಹಮತಿ ನೀಡಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ಮತ್ತು ರಾಜ್ಯ ವೃಂದ ಸಹ ಸೇರಿದೆ ಎಂದು ತಿಳಿಸಿದೆ.