* ರಂಜಿತ್ ಶೃಂಗೇರಿ

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಅಲ್ಪಸಂಖ್ಯಾತ ಸಮುದಾಯದ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. ಇದೀಗ ಪ್ರಸಕ್ತ 2022-23 ನೇ ಸಾಲಿನ  ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ( Vidyasiri Scholarship) ಅರ್ಜಿ ಆಹ್ವಾನಿಸಲಾಗಿದೆ..

ಮನೆಯಿಂದ ಕಾಲೇಜಿಗೆ 5 ಕಿ. ಮೀ. ದೂರ ಇರುವ ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಪಡೆಯದೆ ಇರುವ ಅಲ್ಪಸಂಖ್ಯಾತ ಸಮುದಾಯದ ಕಾಲೇಜು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು..

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು.

* ಎಸ್. ಎಸ್. ಎಲ್. ಸಿ. ಅಂಕಪಟ್ಪಿ

* ಪಿಯುಸಿ / ಸೆಮಿಸ್ಟರ್ ಅಂಕಪಟ್ಪಿ

* ಆಧಾರ್ ಕಾರ್ಡ್

* ಬ್ಯಾಂಕ್ ಪಾಸ್ ಪುಸ್ತಕ

* ಜಾತಿ ಮತ್ತು ಆದಾಯ ಪ್ರಮಾಣ ಪತ್ರ

* ದೂರ ದೃಢೀಕರಣ ಪತ್ರ.

* ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ 1

* ಶಾಲಾ ಶುಲ್ಕದ ರಶೀದಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/10/2022 ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಆಯಾ ತಾಲೂಕಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಪರ್ಕಿಸಬಹುದಾಗಿದೆ. ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಭೇಟಿ ನೀಡಬಹುದಾಗಿದೆ.

 

BREAKING NEWS: ಮರಣದಂಡನೆ ಶಿಕ್ಷೆ ಮಾರ್ಗಸೂಚಿ ಪ್ರಕರಣ: ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ

BREAKING NEWS: ತುರ್ತು ಕಾರ್ಯಾಚರಣೆಗಾಗಿ ಪ್ರವಾಹ ನಿರ್ವಹಣಾ ಘಟಕ ಸ್ಥಾಪನೆ ; ಆರ್.‌ ಅಶೋಕ್

 

Share.
Exit mobile version