ಪಾಕಿಸ್ತಾನದ ಸಿಂಧ್‌ನಲ್ಲಿ ಬಸ್-ಟ್ಯಾಂಕರ್ ನಡುವೆ ಡಿಕ್ಕಿ: 20 ಸಾವು, 6 ಮಂದಿಗೆ ಗಾಯ

ಇಸ್ಲಾಮಾಬಾದ್(ಪಾಕಿಸ್ತಾನ): ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ತೈಲ ಟ್ಯಾಂಕರ್‌ಗೆ ಪ್ರಯಾಣಿಕರ ಬಸ್ ಡಿಕ್ಕಿ ಹೊಡೆದ ಪರಿಣಾಮ ಸುಮಾರು 20 ಜನರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಮುಲ್ತಾನ್-ಸುಕ್ಕೂರ್ ಮೋಟಾರುಮಾರ್ಗದಲ್ಲಿ (ಎಂ-5) ಮಂಗಳವಾರ ಮುಂಜಾನೆ ಅಪಘಾತ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಲಾಹೋರ್‌ನಿಂದ ಕರಾಚಿಗೆ ತೆರಳುತ್ತಿದ್ದ ಪ್ರಯಾಣಿಕರ ಬಸ್, ಮೋಟಾರ್‌ವೇಯಲ್ಲಿ ಇಂಟರ್‌ಚೇಂಜ್‌ನಲ್ಲಿ ಹಿಂಭಾಗದಿಂದ ತೈಲ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ವಾಹನಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 20 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. … Continue reading ಪಾಕಿಸ್ತಾನದ ಸಿಂಧ್‌ನಲ್ಲಿ ಬಸ್-ಟ್ಯಾಂಕರ್ ನಡುವೆ ಡಿಕ್ಕಿ: 20 ಸಾವು, 6 ಮಂದಿಗೆ ಗಾಯ