ಟರ್ಕಿ : ಮಾರಣಾಂತಿಕ ಭೂಕಂಪದಿಂದ ಟರ್ಕಿ, ಸಿರಿಯಾ ದೇಶಗಳು ತತ್ತರಿಸಿವೆ. ಇದರ ಲಾಭ ಪಡೆದುಕೊಂಡು ಸಿರಿಯಾ ಜೈಲಿನಿಂದ 20 ಐಎಸ್ ಭಯೋತ್ಪಾದಕರು ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.
ನೈಋತ್ಯ ಸಿರಿಯಾದ ರಾಜೋ ಪಟ್ಟಣದಲ್ಲಿರುವ ಮಿಲಿಟರಿ ಪೊಲೀಸ್ ಜೈಲಿನಲ್ಲಿ 2,000 ಕ್ಕೂ ಹೆಚ್ಚು ಕೈದಿಗಳಿದ್ದು, ಅದರಲ್ಲಿ ಸುಮಾರು 1,300 ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ಗೆ ಸೇರಿದವರಾಗಿದ್ದಾರೆ ಎಂದು ತಿಳಿದು ಬಂದಿದೆ.
ಭೂಕಂಪ ಸಂಭವಿಸಿದ ಪರಿಣಾಮ ಕೈದಿಗಳು ದಂಗೆ ಮಾಡಲು ಪ್ರಾರಂಭಿಸಿದ್ದರು. ಜೈಲಿನ ಕೆಲವು ಭಾಗಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಸುಮಾರು 20 ಐಎಸ್ ಭಯೋತ್ಪಾದಕರು ಜೈಲಿನಿಂದ ಓಡಿ ಹೋಗಿದ್ದಾರೆ ಎಂದು ಜೈಲಿನ ಅಧಿಕಾರಿಯೊಬ್ಬರು ಎಎಫ್‌ಪಿಗೆ ತಿಳಿಸಿದ್ದಾರೆ.
ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ವಾರ್ ಮಾನಿಟರ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಕೈದಿಗಳು ತಪ್ಪಿಸಿಕೊಂಡಿದ್ದಾರೆಯೇ ಎಂದು ಪರಿಶೀಲಿಸಲು ಸಾಧ್ಯವಾಗಲಿಲ್ಲ. ಆದರೆ ದಂಗೆ ನಡೆದಿದೆ ಎಂದು ದೃಢಪಡಿಸಿದರು.
ಜಿಹಾದಿಗಳನ್ನು ಮುಕ್ತಗೊಳಿಸಲು ಭಯೋತ್ಪಾದಕ ಸಂಘಟನೆಯು ರಾಖಾದಲ್ಲಿ ದಾಳಿ ನಡೆಸಿದ ಒಂದು ತಿಂಗಳ ನಂತರ ಐಎಸ್ ಉಗ್ರರು ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
5 ಸಾವಿರ ಮಂದಿ ಬಲಿ
ಸೋಮವಾರದಿಂದ ಸತತ 5 ಭೂಕಂಪಗಳು ಟರ್ಕಿ ಮತ್ತು ಸಿರಿಯಾದಾದ್ಯಂತ ಸಂಭವಿಸಿದ್ದು, 5 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿದೆ. ಸಾವಿರಾರು ಜನರು ಗಾಯಗೊಂಡಿದ್ದರೆ, ಮನೆಗಳನ್ನು ಕಳೆದುಕೊಂಡು ಜನರು ಬೀದಿಪಾಲಾಗಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚಾಗಬಹುದು : WHO
ಇತ್ತ ವಿಶ್ವಸಂಸ್ಥೆಯು ಸಾವಿನ ಸಂಖ್ಯೆ 20,000 ಕ್ಕಿಂತ ಹೆಚ್ಚಾಗಬಹುದು ಎಂದು ಭವಿಷ್ಯ ನುಡಿದಿದೆ.
ವಿವಿಧ ದೇಶಗಳಿಂದ ಸಹಾಯಹಸ್ತ
ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದಾರೆ. ಏತನ್ಮಧ್ಯೆ, ವಿಪತ್ತು ಪೀಡಿತ ರಾಷ್ಟ್ರಕ್ಕೆ ಸಹಾಯ ಮಾಡಲು ಅಂತಾರಾಷ್ಟ್ರೀಯ ಸಮುದಾಯಗಳು ಧಾವಿಸಿವೆ. ಅನೇಕ ದೇಶಗಳು ನೆರವು ಮತ್ತು ರಕ್ಷಣಾ ಕಾರ್ಯಕರ್ತರನ್ನು ಕಳುಹಿಸಲು ಮುಂದೆ ಬಂದಿವೆ.
Health Tips : ನಿಮ್ಮ ದೇಹದಲ್ಲಿ ಈ ಚಿಹ್ನೆಗಳು ಕಾಣಿಸುತ್ತಿವೆಯಾ? ʼಅಧಿಕ ಕೊಬ್ಬಿನ ಸಮಸ್ಯೆʼಯೇ ಮುಖ್ಯ ಕಾರಣ