ಬೆಂಗಳೂರು: ರಾಜ್ಯ ಸರ್ಕಾರದಿಂದ ಕರೆಯಲಾಗಿದ್ದಂತ 15,000 ಶಿಕ್ಷಕರ ಹುದ್ದೆಯ ನೇಮಕಾತಿ ( Teacher Recruitment ) ಸಂಬಂಧ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿತ್ತು. ಇದೀಗ ಮುಂದಿನ ವಾರಾಂತ್ಯದೊಳಗೆ ಅರ್ಹ ಅಭ್ಯರ್ಥಿಗಳ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸಲಾಗುತ್ತಿದೆ.

BREAKING NEWS: ರಾಜ್ಯ ‘ಸರ್ಕಾರಿ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ: ‘ಪ್ರಭಾರ ಭತ್ಯೆ ದರ’ ಪರಿಷ್ಕರಿಸಿ ಸರ್ಕಾರ ಆದೇಶ

ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ), 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ( Teacher Jobs ) ಪರೀಕ್ಷೆಯ 1:2 ಅಭ್ಯರ್ಥಿಗಳ ಪರಿಶೀಲನಾ ಪಟ್ಟಿಯನ್ನು ಮುಂದಿನ ವಾರಾಂತ್ಯದೊಳಗೆ ಪ್ರಕಟಿಸಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.

ಅಂದಹಾಗೇ ಈಗಾಗಲೇ 15,000 ಶಿಕ್ಷಕರ ಹುದ್ದೆಯ ಭರ್ತಿಯ ಬಳಿಕ, ಮತ್ತೆ 2,500 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂಬುದಾಗಿ ಶಿಕ್ಷಣ ಸಚಿವರು ತಿಳಿಸಿದ್ದರು. ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು 2,500 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಸಹ ಶಿಕ್ಷಕರು – 2,200 ಹುದ್ದೆಗಳು. ದೈಹಿಕ ಶಿಕ್ಷಣ ಶಿಕ್ಷಕರು – 200 ಹುದ್ದೆಗಳು. ವಿಶೇಷ ಶಿಕ್ಷಕರು – 100 ಹುದ್ದೆಗಳಿಗೂ ಶೀಘ್ರವೇ ಅಧಿಸೂಚನೆ ಹೊರ ಬೀಳಲಿದೆ.

Share.
Exit mobile version