ನವದೆಹಲಿ: 15 ವರ್ಷದ ಬಾಲಕಿಯೊಬ್ಬಳು ಅಪಘಾತದಲ್ಲಿ ಸಾವನ್ನಪ್ಪಿದ್ದು, ಆರು ಮಂದಿಗೆ ತನ್ನ ದೇಹದ ಅಂಗಗಳನ್ನು ದಾನ ಮಾಡಿ ಅವರ ಜೀವನಕ್ಕೆ ಬೆಳಕಾಗಿದ್ದಾಳೆ. ಈ ವಿಷಯ ತಿಳಿದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಭಾವುಕರಾಗಿದ್ದಾರೆ.

ಮಾಂಡವಿಯ ಅವರು ಎಬಿವಿಮ್ಸ್, ಡಾ ಆರ್‌ಎಂಎಲ್ ಆಸ್ಪತ್ರೆಯ ಮೊದಲ ಯಶಸ್ವಿ ಹೃದಯ ಕಸಿಗಾಗಿ ಅಭಿನಂದಿಸಿದ್ದಾರೆ. “ಎಬಿವಿಮ್ಸ್, ಡಾ ಆರ್‌ಎಂಎಲ್ ಆಸ್ಪತ್ರೆಯಲ್ಲಿ ಯಶಸ್ವಿ ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆದಿದೆ. 15 ವರ್ಷದ ಬಾಲಕಿಯೊಬ್ಬಳು ತನ್ನ ಸಾವಿಗೂ ಮುನ್ನ, 32 ವರ್ಷದ ಲಕ್ಷ್ಮಿ ದೇವಿ ಸೇರಿದಂತೆ ಆರು ಜೀವಗಳಿಗೆ ಹೊಸ ಜೀವನ ನೀಡಿದ್ದಾಳೆ. ಇದರಿಂದ ನಾನು ಭಾವುಕನಾಗಿದ್ದೇನೆʼ ಎಂದು ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.

“ಅಂಗಾಂಗ ದಾನವು ಅತ್ಯಮೂಲ್ಯವಾದ ಜೀವ ಉಳಿಸುವ ಕೊಡುಗೆಯಾಗಿದೆ. ನಿಸ್ವಾರ್ಥತೆ, ಔದಾರ್ಯ ಮತ್ತು ಸಹಾನುಭೂತಿಯ ಈ ಮಹಾನ್ ಕಾರ್ಯವು ಸ್ಫೂರ್ತಿದಾಯಕವಾಗಿದೆ. ಇದು ಅನೇಕರನ್ನು ಮುಂದೆ ಬರಲು ಮತ್ತು ಅಂಗದಾನದ ಮಾನವೀಯ ಉದ್ದೇಶವನ್ನು ಬಲಪಡಿಸಲು ಪ್ರೇರೇಪಿಸುತ್ತದೆ ಮತ್ತು ಬೇರೊಬ್ಬರ ಹೃದಯ ಬಡಿತಕ್ಕೆ ಕಾರಣವಾಗಿದೆ” ಎಂದಿದ್ದಾರೆ.

ಆಗಸ್ಟ್ 15 ರಂದು ಭೀಕರ ರಸ್ತೆ ಅಪಘಾತದಿಂದಾಗಿ 15 ವರ್ಷದ ಬಾಲಕಿಯ ಮೆದುಳು ನಿಷ್ಕ್ರಿಯವಾಗಿತ್ತು. ನಂತ್ರ, ತನ್ನ ಅಂಗಗಳನ್ನು ಬಿಹಾರದ ಭಾಗಲ್ಪುರದ ಮಹಿಳೆ ಸೇರಿದಂತೆ ಆರು ಜನರ ಜೀವವನ್ನು ಉಳಿಸಿದ್ದಾಳೆ. ಆಗಸ್ಟ್ 20 ರ ಬೆಳಿಗ್ಗೆ 9:00 ಗಂಟೆಗೆ ಬಾಲಕಿಯ ಮೆದುಳು ಸತ್ತಿದೆ ಎಂದು ಘೋಷಿಸಲಾಯಿತು. ಬಳಿಕ 6 ಮಂದಿಗೆ ಆಕೆಯ ಅಂಗಗಳನ್ನು ದಾನ ಮಾಡಲಾಗಿದೆ.

ಚಂಡೀಗಢ ಆಸ್ಪತ್ರೆಯಲ್ಲಿ ಕಸಿ ಸಂಯೋಜಕರಿಂದ ಸಮಾಲೋಚನೆಯ ನಂತರ, ಆಕೆಯ ತಂದೆ, ದೈನಂದಿನ ಕೂಲಿ ಕಾರ್ಮಿಕ ಅಜೋ ಮಾಂಜೋ ಅನುಮತಿಯ ಮೇರೆಗೆ ಆಸ್ಪತ್ರೆಯವರು ಈ ನಿರ್ಧಾರ ತೆಗೆದುಕೊಂಡರು.

BIGG NEWS: ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಲು ನಿರಾಕರಿಸಿದ ಅಶೋಕ್ ಗೆಹ್ಲೋಟ್

BIGG NEWS : ʻ ನಮ್ಮ ಬೆಂಗಳೂರಿನ ಮೂಲ ಸೌಕರ್ಯ ಹದಗೆಟ್ಟಿದೆʼ : ʻದುರದೃಷ್ಟಕರ ಘಟನೆಯಲ್ಲಿ ಅಮಾಯಕ ಬಲಿಯಾಗಿದ್ದಾನೆʼ : ಟ್ವೀಟ್‌ ಮೂಲಕ ಸಿದ್ದರಾಮಯ್ಯ ಕಿಡಿ

ಲಾಕ್‌ಡೌನ್ ವೇಳೆ ವಿಮಾನದಲ್ಲಿ ತನ್ನ ಕಾರ್ಮಿಕರನ್ನು‌ ಮನೆಗೆ ಕಳುಹಿಸಿಕೊಟ್ಟಿದ್ದ ರೈತ ಇಂದು ದೇವಸ್ಥಾನಲ್ಲಿ ಶವವಾಗಿ ಪತ್ತೆ

Share.
Exit mobile version