BREAKING NEWS : ಕ್ರಿಮಿನಾಶಕ ಮಿಶ್ರಿತ ನೀರು ಕುಡಿದು ಮಕ್ಕಳು ಸೇರಿ 15 ಮಂದಿ ಅಸ್ವಸ್ಥ : ಆಸ್ಪತ್ರೆಗೆ ದಾಖಲು

ಮಂಡ್ಯ : ವಿಷಪೂರಿತ ನೀರು ಕುಡಿದು ಮಕ್ಕಳು ಸೇರಿ 15 ಮಂದಿ ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಹೊಸಕೊಪ್ಪಲು ಗ್ರಾಮಕ್ಕೆ ಕಬ್ಬು ಕಟಾವಿಗೆಂದು ಬಳ್ಳಾರಿಯಿಂದ 30 ಜನರು ಬಂದಿದ್ದರು. ಇಂದು ಊಟದ ಬಳಿಕ ಕಬ್ಬು ಕಟಾವು ಮಾಡುತ್ತಿದ್ದ ಸಮೀಪದ ಜಮೀನಿನಲ್ಲಿ ಕ್ರಿಮಿನಾಶಕ ಸಿಂಪಡಿಸಿದ ಡ್ರಮ್ನಲ್ಲಿದ್ದ ನೀರು ಕುಡಿದಿದ್ದಾರೆ. ಇದರಿಂದ ಮಕ್ಕಳು ಸೇರಿ 15ಮಂದಿ ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ದುರಂತ ತಪ್ಪಿದೆ. ಅಸ್ವಸ್ಥಗೊಂಡ 15 … Continue reading BREAKING NEWS : ಕ್ರಿಮಿನಾಶಕ ಮಿಶ್ರಿತ ನೀರು ಕುಡಿದು ಮಕ್ಕಳು ಸೇರಿ 15 ಮಂದಿ ಅಸ್ವಸ್ಥ : ಆಸ್ಪತ್ರೆಗೆ ದಾಖಲು