ಕೌಶಂಬಿ(ಉತ್ತರ ಪ್ರದೇಶ): 13 ವರ್ಷದ ಅತ್ಯಾಚಾರ ಸಂತ್ರಸ್ತೆಯೊಬ್ಬಳು ಮಂಗಳವಾರ ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಅತ್ಯಾಚಾರ ಸಂತ್ರಸ್ತೆಯ ತಂದೆ ನವಜಾತ ಶಿಶುವನ್ನು ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿರುವ ಘಟನೆ ಕೌಶಂಬಿಯಲ್ಲಿ ನಡೆದಿದೆ.

ಅತ್ಯಾಚಾರ ಸಂತ್ರಸ್ತೆ ಕೌಶಂಬಿಯ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಅತ್ಯಾಚಾರ ಸಂತ್ರಸ್ತೆಯ ತಂದೆ ನವಜಾತ ಶಿಶುವನ್ನು ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದ್ದರು.

ಈ ಬಗ್ಗೆ ಸಂತ್ರಸ್ತೆಯ ತಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಮಗು ಅಕ್ರಮವಾಗಿದ್ದರಿಂದ ತನಗೆ ಮಗು ಬೇಡ. ಮಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಿ ಆಕೆಯನ್ನು ನೋಡಿಕೊಳ್ಳಬೇಕು, ಆ ಮಗು ತನ್ನ ಮಗಳ ಬದುಕಿಗೆ ಅಡ್ಡಿಯಾಗಲಿದೆ ಎಂದಿದ್ದಾರೆ.

ಇನ್ನೂ, ಇದಕ್ಕೂ ಮೊದಲು ಬಾಲಕಿಯ ತಂದೆ ಗರ್ಭಪಾತಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಅಕ್ಟೋಬರ್ 15 ರಂದು, ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ CMO/CMS ಗೆ ನ್ಯಾಯಾಲಯವು ಆದೇಶಿಸಿತು. ನಂತರ, ನವೆಂಬರ್ 12 ರಂದು, ಸಂತ್ರಸ್ತೆಯನ್ನು ವೈದ್ಯರ ತಂಡದ ಮೇಲ್ವಿಚಾರಣೆಯಲ್ಲಿ ಇಡಬೇಕು ಮತ್ತು ಆಕೆಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಗರ್ಭಪಾತ ಮಾಡಬೇಕೇ ಅಥವಾ ಮಗುವನ್ನು ಪಡೆಯಬೇಕೇ ಎಂಬುದರ ಕುರಿತು ವೈದ್ಯರ ತಂಡವು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು.

ನಂತರ ಸಿಎಂಎಸ್ ಡಾ.ದೀಪಕ್ ಸೇಠ್ ಅವರ ಮೇಲ್ವಿಚಾರಣೆಯಲ್ಲಿ ಜಿಲ್ಲಾಸ್ಪತ್ರೆಗೆ ಬಾಲಕಿಯನ್ನು ದಾಖಲಿಸಲಾಗಿದ್ದು, ಸಾಮಾನ್ಯ ಹೆರಿಗೆಯಾಗಿದೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಆದರೆ, ಸುರಕ್ಷತೆಗಾಗಿ ಮಗುವನ್ನು ಐಸಿಯುನಲ್ಲಿ ಇರಿಸಲಾಗಿದೆ. ವೈದ್ಯರ ಪ್ರಯತ್ನದ ಹೊರತಾಗಿಯೂ, ಮಗುವನ್ನು ಮನೆಗೆ ಕರೆದೊಯ್ಯಲು ತಂದೆ ನಿರಾಕರಿಸಿದ್ದಾರೆ.

ಶಿವಮೊಗ್ಗ: ಶಾಲಾ ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್‌ ಪಲ್ಟಿ, ಮಕ್ಕಳಿಗೆ ಗಾಯ

ಮಕ್ಕಳು ಪ್ರಯೋಗಾಲಯದಲ್ಲಿ ಹುಟ್ಟುತ್ತಾರೆ , ಪೋಷಕರು ಬಣ್ಣವನ್ನು ನಿರ್ಧರಿಸುತ್ತಾರೆ ಅಂತ ಭವಿಷ್ಯ ನುಡಿದ ಬಾಬಾ ವಂಗಾ

ಶಿವಮೊಗ್ಗ: ಶಾಲಾ ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್‌ ಪಲ್ಟಿ, ಮಕ್ಕಳಿಗೆ ಗಾಯ

ಮಕ್ಕಳು ಪ್ರಯೋಗಾಲಯದಲ್ಲಿ ಹುಟ್ಟುತ್ತಾರೆ , ಪೋಷಕರು ಬಣ್ಣವನ್ನು ನಿರ್ಧರಿಸುತ್ತಾರೆ ಅಂತ ಭವಿಷ್ಯ ನುಡಿದ ಬಾಬಾ ವಂಗಾ

Share.
Exit mobile version