ಉಜ್ಜಯಿನಿ (ಮಧ್ಯಪ್ರದೇಶ) : ಅಪ್ರಾಪ್ತ ಬಾಲಕಿ ಮೇಲೆ ಆಕೆಯ ಮನೆಯಲ್ಲಿಯೇ ಅಕೆಯ ಅತ್ಯಾಚಾರವೆಸಗಿ ಬಳಿಕ ಕತ್ತು ಹಿಸುಕಿ ಕೊಲೆಗೈದಿರುವ ಧಾರುಣ ಘಟನೆ ಉಜ್ಜಯಿನಿ ಗ್ರಾಮದಲ್ಲಿ ನಡೆದಿದೆ.

ಸಂತ್ರಸ್ತ ಬಾಲಕಿ ತನ್ನ ಅಜ್ಜಿಯೊಂದಿಗೆ ಉಜ್ಜಯಿನಿಯಲ್ಲಿ ವಾಸಿಸುತ್ತಿದ್ದಳು. ಶನಿವಾರ ಸಂಜೆ ಮನೆಯವರು ಬಾಲಕಿ ನಾಪತ್ತೆಯಾದ ಬಗ್ಗೆ ದೂರು ದಾಖಲಿಸಿದ್ದರು. ಆದರೆ ಭಾನುವಾರ, ಆಕೆಯ ಶವವು ಮನೆಯ ಮೊದಲ ಮಹಡಿಯಲ್ಲಿ ಧಾನ್ಯದ ಚೀಲಗಳ ರಾಶಿಯ ನಡುವೆ ಬಿದ್ದಿರುವುದು ಕಂಡುಬಂದಿದೆ. ಪ್ರಾಥಮಿಕ ತನಿಖೆಯು ಅತ್ಯಾಚಾರ ಮತ್ತು ಕೊಲೆಯನ್ನು ಸೂಚಿಸುತ್ತದೆ ಎಂದು ಉಜ್ಜಯಿನಿ ಎಸ್ಪಿ ಸತ್ಯೇಂದ್ರ ಶುಕ್ಲಾ ಹೇಳಿದ್ದಾರೆ.

ಸಂತ್ರಸ್ತ ಬಾಲಕಿಯ ಕುತ್ತಿಗೆ ಸೇರಿದಂತೆ ದೇಹದ ಹಲವು ಗಾಯದ ಗುರುತುಗಳಿದ್ದವು. ಇದು ಆಕೆಯ ಮೇಲೆ ಅತ್ಯಾಚಾರವೆಸಗಿರುವುದನ್ನು ಸೂಚಿಸುತ್ತದೆ ಎಂದು ವಿಧಿವಿಜ್ಞಾನ ಅಧಿಕಾರಿ ಪ್ರೀತಿ ಗೇಕ್ವಾಡ್ ಹೇಳಿದ್ದಾರೆ.

ಮನೆಯವರ ಪ್ರಕಾರ, ಶನಿವಾರ ಬೆಳಿಗ್ಗೆ ಬಾಲಕಿಯ ಅಜ್ಜಿ ಮದುವೆಗೆ ತೆರಳಿದ್ದರು. ಹೀಗಾಗಿ ಬಾಲಿಕ ಓರ್ವಳೆ ಮನೆಯಲ್ಲಿದ್ದಳು. ಅಜ್ಜಿ ಮನೆಗೆ ಬಂದು ನೋಡಿದಾಗ ಬಾಲಕಿ ನಾಪತ್ತೆಯಾಗಿದ್ದಳು. ಆದರೆ ಭಾನುವಾರ ಮಹಡಿ ಮೇಲೆ ಆಕೆಯ ಶವ ಪತ್ತೆಯಾಗಿದೆ ಎನ್ನಲಾಗುತ್ತಿದೆ.

Share.
Exit mobile version