ಬೆಳಗಾವಿ: ಸರ್ಕಾರಿ ಅಧಿಕಾರಿಯಾಗಿದ್ದಂತ ಹೆಸ್ಕಾಂ ಸಹಾಯಕ ಎಂಜಿನಿಯರ್ ವಿರುದ್ಧ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸಿದ್ದಂತ ದೂರುದಾರೆ ಸೇರಿ 13 ಮಂದಿಗೆ ಕೋರ್ಟ್ 3 ವರ್ಷ 6 ತಿಂಗಳು ಶಿಕ್ಷೆ ವಿಧಿಸಿ ಆದೇಶಿಸಿದೆ.

ಬೆಳಗಾವಿಯಲ್ಲಿ ಹೆಸ್ಕಾಂ ಸಹಾಯ ಅಧೀಕ್ಷಕ ಅಭಿಯಂತರರಾಗಿದ್ದಂತ ತುಕಾರಾಂ ಮಜ್ಜಿಗೆ ಎಂಬುವರ ವಿರುದ್ಧ ಸಿಂಧು ಎಂಬುವರು ಅತ್ಯಾಚಾರ ಹಾಗೂ ಜೀವ ಬೆದರಿಕೆ ಕೇಸ್ ದಾಖಲಿಸಿದ್ದರು. 11 ವರ್ಷಗಳ ಸುಧೀರ್ಘ ವಿಚಾರಣೆ ನಡೆಸಿದಂತ ಬೆಳಗಾವಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ.

ದೂರುದಾರೆ ಸಿಂಧು ಸೇರಿದಂತೆ 13 ಮಂದಿ ದಾಖಲಿಸಿರೋದು ಸುಳ್ಳು ದೂರಾಗಿದೆ ಎಂಬುದಾಗಿ ಹೇಳಿದಂತ ನ್ಯಾಯಾಲಯವು, ಬಿ.ವಿ ಸಿಂಧು ಸೇರಿದಂತೆ 13 ಜನರಿಗೆ ನ್ಯಾಯಾಲಯವು 3 ವರ್ಷ 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ ತಲಾ 86,000 ದಂಡವನ್ನು ವಿಧಿಸಿ ಆದೇಶಿಸಿದೆ.

ಅಂದಹಾಗೇ ನವೆಂಬರ್.19, 2014ರಂದು ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಬಿ.ವಿ ಸಿಂಧು ಅತ್ಯಾಚಾರ, ಜೀವ ಬೆದರಿಕೆ, ಆತ್ಮಹತ್ಯೆ ಪ್ರಚೋದನೆ ಆರೋಪದಡಿ ಹೆಸ್ಕಾಂ ಅಧಿಕಾರಿ ತುಕಾರಾಂ ವಿರುದ್ಧ ದೂರು ದಾಖಲಿಸಿದ್ದರು. ಈ ಪ್ರಕರಣದ ತನಿಖೆ ನಡೆಸಿದ್ದಂತ ಪೊಲೀಸರು ನ್ಯಾಯಾಲಯಕ್ಕೆ ಬಿ.ರಿಪೋರ್ಟ್ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ನಡೆದಂತ ತನಿಖೆಯಲ್ಲಿ ಅತ್ಯಾಚಾರ, ಜೀವ ಬೆದರಿಕೆ ಹಾಕಿದ್ದು ಸುಳ್ಳು ಎಂಬುದಾಗಿ ಸಾಭೀತಾಗಿತ್ತು. ಈ ಹಿನ್ನಲೆಯಲ್ಲಿ ಸಿಂಧು ಸೇರಿದಂತೆ 13 ಮಂದಿಗೆ ಜೈಲು ಹಾಗೂ ದಂಡ ವಿಧಿಸಿದೆ.

ಕುವೆಂಪು ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವ : ಸ್ನಾತಕ/ಸ್ನಾತಕೋತ್ತರ ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ತುರ್ತು ಪರಿಸ್ಥಿತಿ ಪ್ರಸ್ತಾಪ ತಪ್ಪಿಸಬಹುದಿತ್ತು: ಲೋಕಸಭಾ ಸ್ಪೀಕರ್ ಭೇಟಿ ಮಾಡಿದ ರಾಹುಲ್ ಗಾಂಧಿ

Share.
Exit mobile version