ಅಮೆರಿಕ: ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರು ಕಳೆದ ಗುರುವಾರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಮೃತ ದೇಹದ ಬಳಿ 100ಕ್ಕೂ ಹೆಚ್ಚು ವಿಷಕಾರಿ ಮತ್ತು ವಿಷರಹಿತ ಹಾವುಗಳು ಕಂಡುಬಂದ ಸುದ್ದಿ ಇದೀಗ ಬೆಳಕಿಗೆ ಬಂದಿದೆ.
ಹೌದು, ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದ 9 ವರ್ಷದ ವ್ಯಕ್ತಿಯನ್ನು ಹಿಂದಿನ ದಿನದಿಂದ ನೋಡಿಲ್ಲ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಪೊಲೀಸರು ವ್ಯಕ್ತಿಯ ಮನೆಗೆ ಬಂದು ಬಾಗಿಲು ತೆರೆದರೆ, ವ್ಯಕ್ತಿಯು ನೆಲದ ಮೇಲೆ ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೇ ಆಘಾತಕಾರಿ ಸಂಗತಿಯೆಂದರೆ, ಶವದ ಸುತ್ತಲೂ 124 ಹಾವುಗಳಿದ್ದದ್ದು.
ಹಾವು ಕಡಿತದಿಂದ ವ್ಯಕ್ತಿ ಸಾವನ್ನಪ್ಪಿಲ್ಲ
Charles County says it found 125+ snakes in a Pomfret, MD man’s home. The man was found dead yesterday. No cause of death given yet. County says neighbors had no idea the snakes were even there. Some were venemous, some weren’t. (@wusa9 link: https://t.co/tGfps4cJaj) pic.twitter.com/VWkpgOdn9u
— John Henry (@JohnHenryWUSA) January 20, 2022
ಹಾವಿನ ದಾಳಿಯಿಂದ ಈ ವ್ಯಕ್ತಿ ಸಾವನ್ನಪ್ಪಿರಬಹುದು ಎಂದು ಈಗ ನೀವು ಯೋಚಿಸುತ್ತಿರಬಹುದು. ಆದರೆ, ವ್ಯಕ್ತಿಯ ದೇಹದಲ್ಲಿ ಹಾವು ಕಚ್ಚಿದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ಅವನ ಮೃತದೇಹವನ್ನು ಹಾಳು ಮಾಡಿದ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಆದರೆ, ಈ ವ್ಯಕ್ತಿಯ ಗುರುತನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಈ ವ್ಯಕ್ತಿಯ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ.
ಪೊಲೀಸರ ಪ್ರಕಾರ, 30 ವರ್ಷಗಳ ಇತಿಹಾಸದಲ್ಲಿ ಒಂದೇ ಜಾಗದಲ್ಲಿ ಮೊಟ್ಟಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಹಾವುಗಳು ಪತ್ತೆಯಾಗಿವೆ. ಆತನ ಮನೆಯಲ್ಲಿ 14 ಅಡಿ ಉದ್ದದ ಬರ್ಮಾ ಹೆಬ್ಬಾವು ಸೇರಿದಂತೆ ವಿವಿಧ ಜಾತಿಯ 124 ಹಾವುಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪೊಲೀಸರ ಪ್ರಕಾರ, ಅಮೆರಿಕದ 30 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ಇಷ್ಟೊಂದು ಹಾವುಗಳು ಒಟ್ಟಿಗೆ ಪತ್ತೆಯಾಗಿವೆ. ನಾವು ಎಲ್ಲಾ ಹಾವುಗಳನ್ನು ಸೆರೆಹಿಡಿದಿರುವುದರಿಂದ ಸ್ಥಳೀಯ ಜನರು ಭಯಪಡಬೇಕಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
‘ಮಗನ ಸಾವಿನ ಸುದ್ದಿ’ ಕೇಳಿ ತಾಯಿಯೂ ನಿಧನ: ಸಾವಿನಲ್ಲೂ ಒಂದಾದ ‘ತಾಯಿ-ಮಗ’