ಬೆಂಗಳೂರು : ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಮಹಾಸ್ಪೋಟ ಉಂಟಾಗಿದ್ದು, ಆರಕ್ಷಕರಿಗೂ ಕೊರೊನಾ ಬಿಸಿ ತಟ್ಟಿದೆ. ಇದುವರೆಗೆ ಬೆಂಗಳೂರಿನಲ್ಲಿ 111 ಮಂದಿ ಪೊಲೀಸ್ ಸಿಬ್ಬಂದಿಗಳಿಗೆ ‘ಕೊರೊನಾ ಸೋಂಕು’ ಧೃಡವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 42 ಮಂದಿ ಪೊಲೀಸ್ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಧೃಡವಾಗಿದ್ದು, ಈ ಮೂಲಕ ಬೆಂಗಳೂರಿನಲ್ಲಿ 111 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಹಾಗೂ 111 ಮಂದಿ ಪೊಲೀಸ್ ಸಿಬ್ಬಂದಿಗಳ ಪೈಕಿ 6 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೂ,ರಾಜ್ಯದಲ್ಲಿ ಇಂದು ಮತ್ತೆ ಕೋವಿಡ್ ಸೋಂಕು ಏರಿಕೆಯಾಗಿದೆ. 24 ಗಂಟೆಯಲ್ಲಿ ಹೊಸದಾಗಿ 12 ಸಾವಿರ ಜನರಿಗೆ ಕೋವಿಡ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 30,51,958ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ 12 ಸಾವಿರ ಜನರಿಗೆ ಕೋವಿಡ್ ಶಾಕ್ ಕೊಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 30,51,958ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 901 ಸೋಂಕಿತರು ಸೇರಿದಂತೆ 29,63,957 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ಈಗ ರಾಜ್ಯದಲ್ಲಿ 49,602 ಸಕ್ರೀಯ ಸೋಂಕಿತರು ಇರೋದಾಗಿ ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಿದೆ. ಇದಲ್ಲದೇ ನಾಲ್ವರು ಸೋಂಕಿತರು ಸಾವನ್ನಪ್ಪಿದ್ದು, ಇಲ್ಲಿಯವರೆಗೆ 38,370 ಮಂದಿ ಸಾವನ್ನಪ್ಪಿದಂತೆ ಆಗಿದೆ.
BIGG NEWS : ‘ವೀಕೆಂಡ್ ಕರ್ಪ್ಯೂ’ ವಿಸ್ತರಣೆ ಬಗ್ಗೆ ಗೃಹ ಸಚಿವ ‘ಆರಗ ಜ್ಞಾನೇಂದ್ರ’ ಸುಳಿವು Weekend curfew
BIGG NEWS : ಕೋವಿಡ್ ತಗುಲಿದ ಮಕ್ಕಳಿಗೆ ʼಮಧುಮೇಹದ ಅಪಾಯʼ ಹೆಚ್ಚಿರುತ್ತೆ : ʼಅಧ್ಯಯನʼದಿಂದ ಬೆಚ್ಚಿ ಬೀಳಿಸುವ ವರದಿ