ಚಂಡೀಗಢ: ಆಟಿಕೆ ರೈಲು ಪಲ್ಟಿಯಾದ ಪರಿಣಾಮ 11 ವರ್ಷದ ಬಾಲಕ ಶಹಬಾಜ್ ಮೃತಪಟ್ಟಿರುವ ಘಟನೆ ಪಂಜಾಬ್ನ ಚಂಡೀಗಢದ ಎಲಾಂಟೆ ಮಾಲ್ನಲ್ಲಿ ನಡೆದಿದೆ. ಈ ಘಟನೆ ಜೂನ್ 22ರ ಶನಿವಾರ ವರದಿಯಾಗಿದೆ. ಈ ಘಟನೆಯು ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೀಡಿಯೊವನ್ನು @Gagan4344 ಎಕ್ಸ್ (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ನಲ್ಲಿ ಪೋಸ್ಟ್ ಮಾಡಿದ್ದಾರೆ. 

“ಚಂಡೀಗಢದ ಎಲಾಂಟೆ ಮಾಲ್ನಲ್ಲಿ ಆಟಿಕೆ ರೈಲು ಪಲ್ಟಿಯಾಗಿ ನವನ್ಶಹರ್ನ ಶಹಬಾಜ್ ಎಂಬ 11 ವರ್ಷದ ಬಾಲಕನ ಸಾವಿಗೆ ಕಾರಣವಾದ ದುರಂತ ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣಬಹುದಾಗಿದೆ. ವೀಡಿಯೊದಲ್ಲಿ, ಶಹಬಾಜ್ ಆಟಿಕೆ ರೈಲಿನ ಕಿಟಕಿಯಿಂದ ಹೊರಕ್ಕೆ ವಾಲುತ್ತಿದ್ದಾಗ ಚಾಲಕ ತಿರುವು ತೆಗೆದುಕೊಳ್ಳುತ್ತಿದ್ದಂತೆ ಇದ್ದಕ್ಕಿದ್ದಂತೆ ಪಲ್ಟಿಯಾಗಿರುವುದನ್ನು ಕಾಣಬಹುದು. ಪೊಲೀಸರು ಆಟಿಕೆ ರೈಲನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಆಪರೇಟರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

ಆಟಿಕೆ ರೈಲು ವಶ, ಪ್ರಕರಣ ದಾಖಲು: ಪೊಲೀಸರು ಆಟಿಕೆ ರೈಲನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಅಪಘಾತ ಸಂಭವಿಸಿದಾಗ ಶಹಬಾಜ್ ಆಟಿಕೆ ರೈಲಿನಿಂದ ಇಳಿಯಲು ಪ್ರಯತ್ನಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಅಟಿಕೆ ರೈಲು ಪಲ್ಟಿಯಾದ ಕೂಡಲೇ ಶಹಬಾಜ್ ನನ್ನು ನಜ್ಜುಗುಜ್ಜಾಗಿಸಿದ ಕೂಡಲೇ, ಸುತ್ತಮುತ್ತಲಿನ ಹಲವಾರು ಜನರು ರೈಲಿನೊಳಗೆ ಮಕ್ಕಳನ್ನು ರಕ್ಷಿಸಲು ಧಾವಿಸಿದರು. ಈ ವೇಳೇ ಇತರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಶಹಬಾಜ್ ಗಂಭೀರವಾಗಿ ಗಾಯಗೊಂಡಿದ್ದ ಎನ್ನಲಾಗಿದ್ದು, ಕೂಡಲೇ ಬಾಲಕನನ್ನು ಜಿಎಂಸಿಎಚ್ 32 ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Share.
Exit mobile version