ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಮರಕ್ಕೆ ಡಿಕ್ಕಿ ಹೊಡೆದ ಭಕ್ತರಿದ್ದ ವಾಹನ: 10 ಮಂದಿ ಸಾವು, 7 ಜನರ ಸ್ಥಿತಿ ಗಂಭೀರ

ಉತ್ತರ ಪ್ರದೇಶ: ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 10 ಜನರು ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಹರಿದ್ವಾರದಿಂದ 17 ಮಂದಿ ಭಕ್ತರು ಪಿಕಪ್ ವಾಹನದಲ್ಲಿ ಹಿಂತಿರುಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 730ರ ಗಜರೌಲಾ ಬಳಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ. ಘಟನೆಯಲ್ಲಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನೂ, ಗಾಯಾಳುಗಳನ್ನು ಆಸ್ಪತ್ರಗೆ ಸಾಗಿಸುವ ಮಾರ್ಗ ಮಧ್ಯೆಯೇ ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನುಳಿದವರನ್ನು … Continue reading ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಮರಕ್ಕೆ ಡಿಕ್ಕಿ ಹೊಡೆದ ಭಕ್ತರಿದ್ದ ವಾಹನ: 10 ಮಂದಿ ಸಾವು, 7 ಜನರ ಸ್ಥಿತಿ ಗಂಭೀರ