ಹಾವೇರಿ : ನಾನು ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಆಸ್ಟ್ರೇಲಿಯಾದಿಂದ ಬಂದು ಮತ ಹಾಕುತ್ತಿದ್ದೇನೆ. ಸಮರ್ಥ ನಾಯಕನ ಆಯ್ಕೆಗಾಗಿ ಪ್ರತಿಯೊಬ್ಬರು ಮತದಾನ ಮಾಡಿ ಒಂದು ವೇಳೆ ಮತ ಹಾಕದೆ ಇರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡು ಶಿಕ್ಷೆ ನೀಡಿ ಎಂದು ನಟಿ ಭಾವನಾ ಶಿವಾನಂದ ತಿಳಿಸಿದರು.

ಇಂದು ಅವರು ಹಾವೇರಿ ಜಿಲ್ಲೆಯಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ನಾನು ಆಸ್ಟ್ರೇಲಿಯಾದಿಂದ ಅಷ್ಟು ದೂರದಿಂದ ಬಂದು ಮತ ಹಾಕುತ್ತಿದ್ದೇನೆ ಆದರೆ ಇಲ್ಲಿಯ ಜನರಿಗೆ ಏನಾಗಿದೆಯೋ ಗೊತ್ತಾಗುತ್ತಿಲ್ಲ. ಅದರಲ್ಲೂ ಬೆಂಗಳೂರಿನ ಜನತೆ ಮತದಾನ ಪ್ರಕ್ರಿಯೆಯಲ್ಲಿ ಆಸಕ್ತಿ ತೋರದೆ ಇರುವುದು ತುಂಬಾ ಬೇಸರದ ಸಂಗತಿ ಎಂದು ತಿಳಿಸಿದರು.

ಸಮರ್ಥನ ನಾಯಕನನ್ನು ಆಯ್ಕೆ ಮಾಡಿದರೆ ದೇಶಕ್ಕೂ ಒಳ್ಳೆಯದು, ಜನರಿಗೆ ಒಳ್ಳೆಯದು, ಮುಂದಿನ ಭವಿಷ್ಯದ ಪೀಳಿಗೆಗೂ ಒಳ್ಳೆಯದು. ನಿಮ್ಮ ಒಂದು ಮತದಿಂದ ಭವಿಷ್ಯದಲ್ಲಿ ಒಳ್ಳೆಯ ನಾಯಕ ಊಟಿಕೊಳ್ಳುತ್ತಾನೆ ಇದರಿಂದ ದೇಶದ ಅಭಿವೃದ್ಧಿ ಆಗಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ನಾನು ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಆಸ್ಟ್ರೇಲಿಯಾದಿಂದ ಬಂದು ಮತ ಹಾಕುತ್ತಿದ್ದೇನೆ. ಬೇರೆ ದೇಶಗಳಲ್ಲಿ ಚುನಾವಣೆ ನಡೆದಾಗ ಅಲ್ಲಿನ ಪ್ರಜೆಗಳು ಅನ್ಯ ದೇಶದಲ್ಲಿದ್ದರೆ ಅಲ್ಲಿ ಬಂದು ಮತದಾನ ಮಾಡದೆ ಹೋದರೆ ಅವರಿಗೆ ತಾವು ಕೆಲಸ ಮಾಡುತ್ತಿರುವ ಸಂಸ್ಥೆಗಳು ದಂಡ ವಿಧಿಸುತ್ತವೆ. ಇಲ್ಲವಾದರೆ ವೇತನದಲ್ಲಿ ಕಡಿತಗೊಳಿಸುತ್ತದೆ ಅದೇ ರೀತಿಯಾಗಿ ಭಾರತದಲ್ಲಿ ಅಂತಹ ಯಾವುದಾದರೂ ಕಠಿಣ ಕಾನೂನು ಕ್ರಮ ಜಾರಿಗೊಳಿಸಬೇಕು. ಇಲ್ಲವಾದರೆ ಮತ ಹಾಕದೆ ಇರುವವರಿಗೆ ಶಿಕ್ಷೆ ನೀಡಬೇಕು ಎಂದು ತಿಳಿಸಿದರು.

Share.
Exit mobile version