ಸರ್ಕಾರಿ ವೈದ್ಯರಿಗೆ ಶೀಘ್ರದಲ್ಲಿಯೇ ಸಿಹಿ ಸುದ್ದಿ ಕೊಡ್ತೀವಿ: ಶ್ರೀರಾಮುಲು – Kannada News Now


State

ಸರ್ಕಾರಿ ವೈದ್ಯರಿಗೆ ಶೀಘ್ರದಲ್ಲಿಯೇ ಸಿಹಿ ಸುದ್ದಿ ಕೊಡ್ತೀವಿ: ಶ್ರೀರಾಮುಲು

ಕಲಬುರಗಿ: ವೈದ್ಯರ ಕೆಲ ಬೇಡಿಕೆಗಳನ್ನ ಈಡೇರಿಸುವ ಮೂಲಕ ವೈದ್ಯರಿಗೆ ಶೀಘ್ರದಲ್ಲಿಯೇ ಸಿಹಿ ಸುದ್ದಿಯನ್ನು ಕೊಡುತ್ತೇವೆ. ಅಲ್ಲಿಯವರೆಗೂ ವೈದ್ಯರು ಮುಷ್ಕರಕ್ಕೆ ಮುಂದಾಗಲ್ಲ ಅನ್ನೋ ಭರವಸೆಯಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಇನ್ನು ಸಿಎಂ ಪುತ್ರ ವಿಜಯೇಂದ್ರ ಆರೋಗ್ಯ ಇಲಾಖೆ ಅಷ್ಟೇ ಅಲ್ಲ ಯಾವ ಇಲಾಖೆಯಲ್ಲಿಯೂ ಹಸ್ತಕ್ಷೇಪ ಮಾಡ್ತಿಲ್ಲ. ಸಿಎಂ ಪುತ್ರ ಅನ್ನೋ ಕಾರಣಕ್ಕಾಗಿ ಆ್ಯಕ್ಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ ಅಷ್ಟೇ. ವೈದ್ಯರು ವಿಜಯೇಂದ್ರ ಬಳಿ ಹೋಗಿ ಚರ್ಚೆ ಮಾಡಿದ್ದಾರೆ. ಆ ವಿಷಯಗಳನ್ನ ಸಿಎಂ ಜೊತೆ ಚರ್ಚಿಸಿ ಇತ್ಯರ್ಥ ಮಾಡಬಹುದು ಎಂದಿದ್ದಾರೆ.

ಅಧಿವೇಷನಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಅನುಮಾನವಿದ್ದು, ಅತಿವೃಷ್ಟಿ ಮತ್ತು ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಿಎಂ ದೆಹಲಿಗೆ ಹೋಗಿದ್ದಾರೆ ಎಂದು ತಿಳಿಸಿಸಿದ್ದಾರೆ.