ಭಾರತದಲ್ಲಿ ಸ್ಪುಟ್ನಿಕ್ V ಕ್ಲಿನಿಕಲ್ ಪ್ರಯೋಗ ನಡೆಸಲು ಡಿಸಿಜಿಐ ಅನುಮತಿ – Kannada News Now


India

ಭಾರತದಲ್ಲಿ ಸ್ಪುಟ್ನಿಕ್ V ಕ್ಲಿನಿಕಲ್ ಪ್ರಯೋಗ ನಡೆಸಲು ಡಿಸಿಜಿಐ ಅನುಮತಿ

ನವದೆಹಲಿ: ಕೋವಿಡ್-19 ನಿವಾರಣೆಗಾಗಿ ರಷ್ಯಾದಲ್ಲಿ ತಯಾರಿಸಲಾಗಿರುವ ಸ್ಪುಟ್ನಿಕ್ V ಲಸಿಕೆಯನ್ನು ಭಾರತದಲ್ಲಿ ಕ್ಲಿನಿಕಲ್ ಟ್ರಯಲ್ ಗಳಿಗೆ ಒಳಪಡಿಸಲು ಔಷಧ ನಿಯಂತ್ರಕ (ಡಿಸಿಜಿಐ) ಅನುಮೋದನೆ ನೀಡಿದೆ.

ಸೆಪ್ಟೆಂಬರ್ 16 ರಂದು ರಷ್ಯಾದ ನೇರ ಹೂಡಿಕೆ ಫಂಡ್ (ಆರ್ ಡಿಐಎಫ್) ಹಾಗೂ ಡಾ. ರೆಡ್ಡಿಸ್ ಲ್ಯಾಬರೋಟರಿ ಲಿಮಿಟೆಡ್ ಭಾರತದಲ್ಲಿ ಸ್ಪುಟ್ನಿಕ್ V ಕೋವಿಡ್-19 ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆಸಲು ಒಪ್ಪಿಗೆ ಸೂಚಿಸಿದ್ದವು. 2 ಹಾಗೂ 3 ನೇ ಹಂತದಲ್ಲಿ ಕ್ಲಿನಿಕಲ್ ಟ್ರಯಲ್ ಗಳನ್ನು ನಡೆಸಲು ಈ ಅನುಮೋದನೆ ನೀಡಲಾಗಿದೆ.

ಸ್ಪುಟ್ನಿಕ್-ವಿ ಅಂದರೆ ಅಡೆನೊವೈರಸ್ ವೆಕ್ಟರ್ ಆಧಾರಿತ ಲಸಿಕೆಯನ್ನು ಗಮಲೇಯ ಸೈಂಟಿಫಿಕ್ ರಿಸರ್ಚ್ ಇನ್ಸ್​​ಟಿಟ್ಯೂಟ್​​​ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿಯ ಮತ್ತು ರಷ್ಯಾದ ನೇರ ಹೂಡಿಕೆ ನಿಧಿಯು ಅಭಿವೃದ್ಧಿಪಡಿಸಿದೆ.

ಕೊರೋನಾ ವಿರುದ್ಧ ಪರಿಣಾಮಕಾರಿ ಲಸಿಕೆಯನ್ನು ಹೊರತರಲು ಬದ್ಧರಾಗಿದ್ದೇವೆ ಎಂದು ರೆಡ್ಡೀಸ್ ಲ್ಯಾಬರೋಟರೊಯ ಸಹ ಅಧ್ಯಕ್ಷರಾದ ಜಿವಿ ಪ್ರಸಾದ್ ಹೇಳಿದ್ದಾರೆ.
error: Content is protected !!