ಸುಭಾಷಿತ :

Monday, February 24 , 2020 10:38 PM

ಈ ಕಾರಣದಿಂದಲೂ ಸೌಂದರ್ಯ ಹಾಳಾಗಬಹುದು… ಇರಲಿ ಗಮನ


Friday, September 13th, 2019 12:22 pm

ಸ್ಪೆಷಲ್ ಡೆಸ್ಕ್ : ಹಲವಾರು ಕಾರಣಗಳಿಂದ ಸೌಂದರ್ಯ ಹಾಳಾಗುತ್ತದೆ. ಇದಕ್ಕೆ ಧೂಳು, ಸರಿಯಾದ ಆರೈಕೆ ಇಲ್ಲದೆ ಮಾತ್ರ ಸೌಂದರ್ಯ ಹಾಳಾಗೋದು ಅನ್ನೋದು ತಪ್ಪು. ಸೌಂದರ್ಯ ಹಾಳಾಗಲು ನೂರಾರು ಕಾರಣಗಳಿವೆ. ಅವುಗಳಲ್ಲಿ ನಿದ್ರಿಸುವ ಭಂಗಿ, ಸೋಪು ಎಲ್ಲವೂ ಸೇರಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ ನೋಡಿ…

ನಿದ್ರಿಸುವ ಭಂಗಿ : ನೀವು ಮಲಗುವ ಭಂಗಿ ಸರಿಯಾಗಿರದಿದ್ದರೆ ಅಂದರೆ ಅಂಗಾತ ಮಲಗಿದರೆ ಮುಖದ ಮೇಲೆ ಅಧಿಕ ಒತ್ತಡ ಉಂಟಾಗಿ ಮುಖದ ಮೇಲೆ ನೆರಿಗೆ ಉಂಟಾಗುತ್ತದೆ.

ಸೋಪು : ಸೋಪು ಬಳಸಿದರೆ ಮುಖದ ಮಾಯಿಶ್ಚರೈಸರ್‌ ಹಾಳಾಗುತ್ತದೆ. ಇದು ತ್ವಚೆಯನ್ನು ಡ್ರೈ ಮಾಡುತ್ತದೆ. ಆದುದರಿಂದ ಸೋಪು ಬದಲು ಫೇಸ್‌ ವಾಶ್‌ ಬಳಸಿ.

ಸ್ಮೋಕಿಂಗ್‌ : ಧೂಮಪಾನ ಮಾಡುವುದರಿಂದ ಕೇವಲ ಆರೋಗ್ಯದ ಮೇಲೆ ಮಾತ್ರವಲ್ಲ ಮುಖದ ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ಮುಖ ಬೇಗನೆ ಸುಕ್ಕುಗಟ್ಟುತ್ತದೆ.

ಮೊಬೈಲ್‌ ಎಫೆಕ್ಟ್‌ : ಮೊಬೈಲ್‌ನಲ್ಲಿ ನಾವು ಗಂಟೆಗಟ್ಟಲೆ ಕಾಲಹರಣ ಮಾಡುತ್ತೇವೆ. ಮೊಬೈಲ್‌ ಸ್ಕ್ರೀನ್‌ ಮೇಲೆ ಅದೆಷ್ಟೋ ಕೊಳೆ ಶೇಖರವಾಗಿರುತ್ತದೆ ಅದು ತಿಳಿದು ತಿಳಿಯದೆಯೋ ನಿಮ್ಮ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ.

ತಲೆ ಹೊಟ್ಟು : ತಲೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಲ್ಲವಾದರೆ ತಲೆಹೊಟ್ಟು ಉಂಟಾಗಿ ಅದು ಮುಖದ ಮೇಲೆ ಬಿದ್ದಾಗ ಗುಳ್ಳೆಗಳು ಏಳುತ್ತವೆ. ಆದುದರಿಂದ ಪ್ರತಿದಿನ ತಲೆಗೆ ಸ್ನಾನ ಮಾಡಿ ಕೂದಲು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions