ಅಯೋಧ್ಯೆ ನಗರಿ ಇದೀಗ ನವವಧುವಿನಂತೆ ಸಿಂಗಾರಗೊಂಡಿದೆ. ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಯಾವುದೇ ಸ್ಟೀಲ್‌ ಅಥವಾ ಕಬ್ಬಿಣವನ್ನು ಬಳಕೆ ಮಾಡಿಲ್ಲ. ಇವೆಲ್ಲದರ ಜೊತೆಗೆ ರಾಮಮಂದಿರ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದೆ. ರಾಮಮಂದಿರಕ್ಕೆ ಸಂಬಂಧಪಟ್ಟ ಪ್ರಮುಖ ಅಂಶಗಳ ಕುರಿತು ಮಾಹಿತಿ ಇಲ್ಲಿದೆ.

– ರಾಮ ಮಂದಿರ ಸಾಂಪ್ರದಾಯಿಕ ನಾಗರ ಶೈಲಿಯಲ್ಲಿದೆ.
– ಮಂದಿರವು 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು ಸೇರಿ), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ.
– ರಾಮ ಮಂದಿರವು 3 ಅಂತಸ್ತಿನದ್ದಾಗಿದ್ದು, ಪ್ರತಿ ಮಹಡಿಯೂ 20 ಅಡಿ ಎತ್ತರ ಹೊಂದಿದೆ. ರಾಮ ಮಂದಿರದಲ್ಲಿ ಒಟ್ಟು 392 ಪಿಲ್ಲರ್ಸ್ಸ್‌ ಗಳಿದ್ದು, 44 ದ್ವಾರಗಳನ್ನು ಹೊಂದಿದೆ.
– ಪ್ರಧಾನ ಗರ್ಭಗುಡಿಯಲ್ಲಿ ಭಗವಾನ್‌ ಶ್ರೀರಾಮನ ಬಾಲ್ಯದ ಮೂರ್ತಿ ಪ್ರತಿಷ್ಠಾಪನೆ ಮತ್ತು ಮೊದಲ ಮಹಡಿಯಲ್ಲಿ ಶ್ರೀರಾಮ್‌ ದರ್ಬಾರ್.‌
– ನೃತ್ಯ ಮಂಟಪ, ರಂಗ್‌ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮಂಟಪ ಮತ್ತು ಕೀರ್ತನ್‌ ಮಂಟಪಗಳಿವೆ.
– ರಾಮ ಮಂದಿರದ ಪಿಲ್ಲರ್ಸ್ಸ್‌ ಮತ್ತು ಗೋಡೆಗಳ ಮೇಲೆ ದೇವರು, ದೇವತೆಗಳ ಚಿತ್ರಗಳನ್ನು ಕೆತ್ತಲಾಗಿದೆ.
– ಪ್ರವೇಶ ದ್ವಾರ ಪೂರ್ವದಲ್ಲಿದ್ದು, ಸಿಂಹ ದ್ವಾರದ ಮೂಲಕ 32 ಮೆಟ್ಟಿಲುಗಳನ್ನು ಹತ್ತಿ ಪ್ರವೇಶ ದ್ವಾರ ಪ್ರವೇಶಿಸಬೇಕು.
– ವಿಕಲಚೇತನರು ಮತ್ತು ವೃದ್ಧರಿಗಾಗಿ ಲಿಫ್ಟ್‌ ಮತ್ತು ಇಳಿಜಾರು (ವ್ಹೀಲ್‌ ಚೇರ್‌ ಬಳಸಲು) ಮೆಟ್ಟಿಲುಗಳ ವ್ಯವಸ್ಥೆ ಇದೆ.
– ದೇವಾಲಯದ ಸುತ್ತ 734 ಮೀಟರ್‌ ಗಳಷ್ಟು ಉದ್ದದ ಆವರಣ ಗೋಡೆ ಹೊಂದಿದ್ದು, 14 ಅಡಿ ಅಗಲವಾಗಿದೆ.
– ದೇವಾಲಯದ ಕಂಪೌಂಡ್‌ ನ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಂದಿರಗಳು ನಿರ್ಮಾಣಗೊಳ್ಳಲಿದೆ. ಅದರಲ್ಲಿ ಸೂರ್ಯ ದೇವ, ದೇವಿ ಭಗವತಿ, ಗಣೇಶ್‌ ಭಗವಾನ್‌, ಭಗವಾನ್‌ ಶಿವನ ಮಂದಿರವನ್ನು ಒಳಗೊಂಡಿದೆ. ಅಲ್ಲದೇ ಮಾ ಅನ್ನಪೂರ್ಣ ಮಂದಿರ, ಹನುಮಾನ್‌ ಜೀ ಮಂದಿರ ಸೇರಿದೆ.
– ರಾಮ ಮಂದಿರದ ಸಮೀಪ ಪುರಾಣ ಪ್ರಸಿದ್ಧ ಸೀತಾ ಕುಂಡ್‌ ಇದ್ದು, ಇದು ಪುರಾತನ ಕಾಲದ್ದಾಗಿದೆ.
– ಶ್ರೀರಾಮ ಜನ್ಮಭೂಮಿ ಮಂದಿರದ ಆವರಣದಲ್ಲಿ ಇನ್ನೂ ಹಲವು ಮಂದಿರಗಳ ನಿರ್ಮಾಣದ ಪ್ರಸ್ತಾಪವಿದ್ದು, ಅವುಗಳಲ್ಲಿ ಮಹರ್ಷಿ ವಾಲ್ಮೀಕಿ, ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯಾ, , ನಿಶಾದ್‌ ರಾಜ್‌, ಮಾತಾ ಶಬರಿ ಮತ್ತು ದೇವಿ ಅಹಲ್ಯಾ ಮಂದಿರ ನಿರ್ಮಾಣವಾಗಲಿದೆ.
– ಆವರಣದ ನೈರುತ್ಯ ಭಾಗದಲ್ಲಿ ಕುಬೇರ ತಿಲಾದಲ್ಲಿ ಪ್ರಾಚೀನ ಶಿವಾಲಯವಿದ್ದು, ಅಲ್ಲಿ ಜಟಾಯು ಸ್ಥಾಪನೆಯೊಂದಿಗೆ ಶಿವ ಮೂರ್ತಿಯನ್ನು ಪುನರ್‌ ಸ್ಥಾಪಿಸಲಾಗಿದೆ.
– ಮಂದಿರದ ಯಾವುದೇ ಭಾಗದಲ್ಲಿಯೂ ಕಬ್ಬಿಣ, ಅಲ್ಯೂಮಿನಿಯಂ ಲೋಹ ಬಳಕೆ ಮಾಡಿಲ್ಲ.
– ಮಂದಿರದ ತಳಪಾಯವನ್ನು 14 ಮೀಟರ್‌ ದಪ್ಪದ ರೋಲರ್‌ ಕಾಂಪ್ಯಾಕ್ಟ್‌ ಕಾಂಕ್ರೀಟ್‌ ಪದರದಿಂದ ನಿರ್ಮಿಸಲಾಗಿದ್ದು, ಇದು ಕೃತಕ ಬಂಡೆಯ ಅನುಭವ ನೀಡಲಿದೆ.
– ನೆಲದ ತೇವಾಂಶದ ರಕ್ಷಣೆಗಾಗಿ ಗ್ರಾನೈಟ್‌ ಬಳಸಿ 21 ಅಡಿ ಎತ್ತರದ ಮೇಲ್ಫಾಯ ನಿರ್ಮಿಸಲಾಗಿದೆ.
– ಮಂದಿರದ ಸಂಕೀರ್ಣ, ಒಳಚರಂಡಿ ಸಂಸ್ಕರಣಾ ಘಟಕ, ನೀರು ಸಂಸ್ಕರಣಾ ಘಟಕ, ಅಗ್ನಿ ಸುರಕ್ಷತೆ, ನೀರು ಸರಬರಾಜು ಮತ್ತು ವಿದ್ಯುತ್‌ ಕೇಂದ್ರವನ್ನು ಹೊಂದಿದೆ.
– 25,000 ಜನರ ಸಾಮರ್ಥ್ಯದ ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದ್ದು, ಇದು ಯಾತ್ರಾರ್ಥಿಗಳಿಗೆ ವೈದ್ಯಕೀಯ ಮತ್ತು ಲಾಕರ್‌ ಸೌಲಭ್ಯವನ್ನು ಒದಗಿಸುತ್ತದೆ.
– ಮಂದಿರದ ಆವರಣದಲ್ಲಿ ಪ್ರತ್ಯೇಕ ಸ್ನಾನ ಗೃಹ, ವಾಶ್‌ ರೂಂಗಳು, ವಾಶ್‌ ಬೇಸಿನ್‌ ಗಳು, ನೀರಿನ ವ್ಯವಸ್ಥೆಯನ್ನು ಹೊಂದಿದೆ.
– ಭವ್ಯ ರಾಮ ಮಂದಿರವನ್ನು ಸಂಪೂರ್ಣವಾಗಿ ಭಾರತದ ಸಾಂಪ್ರದಾಯಿಕ ಮತ್ತು ದೇಸೀ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಜನವರಿ 22ರಂದು 12.20ಕ್ಕೆ ಬಾಲರಾಮನ ಮೂರ್ತಿಯ ಪ್ರತಿಷ್ಠಾಪನೆ ನೆರವೇರಲಿದೆ.

Share.
Exit mobile version