ಫಾರ್ಮುಲಾ ರೇಸ್ ಜೂನಿಯರ್ ಸೀರೀಸ್ : ರಾಜ್ಯದ ಯಶ್ ಆರಾಧ್ಯಗೆ ಪ್ರಶಸ್ತಿಯ ಗರಿ


Wednesday, May 31st, 2017 5:54 am

ಬೆಂಗಳೂರು : ಎಂಎಂಎಸ್ ಫಾರ್ಮುಲಾ ಜೂನಿಯರ್ ಸೀರಿಸ್ ನಲ್ಲಿ ಬೆಂಗಳೂರಿನ ಬಿಷಪ್ ಕಾಟನ್ ಬಾಯ್ಸ್ ಶಾಲೆಯ 9 ನೇ ತರಗತಿ ವಿದ್ಯಾರ್ಥಿ 14 ವರ್ಷದ ಯಶ್ ಆರಾಧ‍್ಯ ಉತ್ತಮ ಪ್ರದರ್ಶನ ನೀಡಿದ್ದಾರೆ.

ಮೇ. 27 ಮತ್ತು 28 ರಂದು ಕೊಯಮತ್ತೂರಿನಲ್ಲಿ ಎಂಎಂಎಸ್ ಫಾರ್ಮುಲಾ ಜೂನಿಯರ್ ಸೀರಿಸ್ ಸ್ಪರ್ಧೆಯ 2 ನೇ ಸುತ್ತಿನ ಗೆಲುವಿನೊಂದಿಗೆ ಐದು ಸುತ್ತು ಒಳಗೊಂಡ ಈ ರೇಸ್ ನಲ್ಲಿ ಯಶ್ ಒಟ್ಟು 177 ಪಾಯಿಂಟ್ಸ್ ಗಳಿಸಿ ಉಪಚಾಂಪಿಯನ್ ಕಿರೀಟ ಪಡೆದು ಚಿಕ್ಕ ವಯಸ್ಸಿನಲ್ಲಿಯೇ ರೇಸ್ ನಲ್ಲಿ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸೇಲಂನ 24 ವರ್ಷದ ರೂಪೇಶ್ ಶಿವಕುಮಾರ್ 199 ಪಾಯಿಂಟ್ಸ್ ನೊಂದಿಗೆ ಚಾಂಪಿಯನ್ ಮತ್ತು 145 ಪಾಯಿಂಟ್ಸ್ ಗಳಿಸಿದ ಶ್ರೀಲಂಕಾದ ಕೆವಿನ್ ಪೆರೇರಾ 2 ನೇ ರನ್ನರ್ ಆಫ್ ಸ್ಥಾನ ಪಡೆದರು.

ಫಾರ್ಮುಲಾ ಎಲ್.ಜಿ.ಬಿ ಸ್ವಿಫ್ಟ್ 1 ಆಸನದ ತೆರೆದ ವೀಲ್ ಕ್ಲಾಸ್ ಸ್ಪರ್ಧೆಯಾಗಿದ್ದು, ಭಾರತದಲ್ಲಿ 2003 ರಲ್ಲಿ ಪರಿಚಯಿಸಲಾಯಿತು. ಯೂರೋಪಿನ ಫಾರ್ಮುಲಾ ಫೋರ್ಡ್ ಸೀರೀಸ್ ಗೆ ಭಾರತದಲ್ಲಿ ಇದು ಸಮ ಎಂದು ಪರಿಗಣಿಸಬಹುದು. 2006 ರಿಂದ ಈ ಕಾರು ಫಾರ್ಮುಲಾ ಮಾರುತಿಯಾಗಿ ಪ್ರವೇಶ ಮಟ್ಟದ ಫಾರ್ಮುಲಾ ಕಾರ್ ಆಗಿ ಪರಿಚಿತವಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions