ಸುಭಾಷಿತ :

Thursday, January 23 , 2020 6:00 PM

ಪುರಿ ಜಗನ್ನಾಥ್ ಡ್ರೀಮ್ ಪ್ರಾಜೆಕ್ಟ್ ನಿಂದ ಯಶ್ ಔಟ್, ವಿಜಯ್ ದೇವರಕೊಂಡ ಇನ್?


Friday, August 16th, 2019 11:21 am

ಸಿನಿಮಾ ಡೆಸ್ಕ್ : ಕೆಜಿಎಫ್ ಚಿತ್ರದ ಮೂಲಕ ದೇಶದೆಲ್ಲೆಡೆ ಗಮನ ಸೆಳೆದ ಯಶ್ ತೆಲುಗು ಸ್ಟಾರ್ ನಿರ್ದೇಶಕರ ಚಿತ್ರಕ್ಕೆ ಈ ಮೊದಲು ಆಯ್ಕೆಯಾಗಿದ್ದು, ಈಗ ಅವರು ಚಿತ್ರದಿಂದ ಹೊರಬಂದಿದ್ದು , ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿ ಹಾರಿದಾಡುತ್ತಿದೆ.

ಕೆಲ ದಿನಗಳ ಹಿಂದೆ ತೆಲುಗು ಚಿತ್ರರಂಗದ ಜನಪ್ರಿಯ ನಿರ್ದೇಶಕ ಪುರಿ ಜಗನ್ನಾಥ್ ತಮ್ಮ ಡ್ರೀಮ್ ಪ್ರಾಜೆಕ್ಟ್ ‘ಜನ ಗಣ ಮನ’ ಚಿತ್ರಕ್ಕೆ ನಾಯಕನಾಗಿ ರಾಕಿಂಗ್ ಸ್ಟಾರ್ ಯಶ್ ನಟಿಸಬೇಕೆಂದು ಬೆಂಗಳೂರಿನಲ್ಲಿ ಎರಡು ಬಾರಿ ಅವರನ್ನು ಭೇಟಿಯಾಗಿ ಅವರ ಜೊತೆ ಸ್ಕ್ರಿಪ್ಟ್ ಬಗ್ಗೆ ಮಾತು ಕತೆ ನಡೆಸಲಾಗಿತ್ತು ಎಂದು ಹೇಳಲಾಗಿತ್ತು. ಇದಾದ ನಂತರ ಇತ್ತೀಚಿಗೆ ಬಂದ ಮಾಹಿತಿ ಪ್ರಕಾರ ಕೆಜಿಎಫ್ ನಾಯಕ ಯಶ್ ಕೆಲವು ವಯಕ್ತಿಕ ಕಾರಣಗಳಿಂದ ಜನಗಣಮನ ಚಿತ್ರದಿಂದ ಹೊರ ಬಂದಿದ್ದು, ಅವರ ಜಾಗಕ್ಕೆ ವಿಜಯ್ ದೇವರಕೊಂಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಚಿತ್ರದ ಕುರಿತು ದೊಡ್ಡದಾಗಿ ಕನಸು ಕಂಡಿದ್ದ ಪುರಿ ಜಗನ್ನಾಥ್ ಈ ಹಿಂದೆ ಪ್ರಿನ್ಸ್ ಮಹೇಶ್ ಬಾಬು ಅವರನ್ನು ನಾಯಕನಾಗಿ ಆಯ್ಕೆ ಮಾಡಿದ್ದರು,ಆದರೆ ಯಾವುದೊ ಕಾರಣಕ್ಕೆ ಮಹೇಶ್ ಬಾಬು ಚಿತ್ರದಿಂದ ಹಿಂದೆ ಸಾರಿದರು. ಇದಕ್ಕೂ ಮುನ್ನ ಚಿರಂಜೀವಿ ಅವರಿಗೂ ಆಫ಼ರ್ ನೀಡಲಾಗಿತ್ತು ಅವರು ನಿರಾಕರಿಸಿದ್ದರು ಎನ್ನಲಾಗಿದೆ. ಕೆಜಿಎಫ್ ಹಿಟ್ ಆದ ಬಳಿಕ ಯಶ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಯಶ್ ಅಭಿಮಾನಿಗಳು ಸಹ ಪುರಿ ಜಗನ್ನಾಥ್ ಮತ್ತು ಯಶ್ ಕಾಂಬಿನೇಷನ್ ಚಿತ್ರಕ್ಕಾಗಿ ಕಾಯುತ್ತಿದ್ದರು. ಆದರೆ ಇದೀಗ ಪುರಿ ಜಗನ್ನಾಥ್ ತಮ್ಮ ಮುಂದಿನ ಪ್ರಾಜೆಕ್ಟ್ ಗೆ ವಿಜಯ್ ದೇವರಕೊಂಡ ಅವರನ್ನು ಆಯೆ ಮಾಡಿಕೊಂಡಿದ್ದು ಯಶ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions