ವಿಶ್ವ ರಕ್ತದಾನಿಗಳ ದಿನ : ರಕ್ತದಾನದ ಮಹತ್ವ ತಿಳಿಯಿರಿ


Thursday, June 14th, 2018 12:05 pm

ಪ್ರತಿವರ್ಷ ಜೂನ್ ೧೪ನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಣೆಮಾಡಲಾಗುತ್ತದೆ. ಒಬ್ಬ ವ್ಯಕ್ತಿ ಸ್ವಯಂ ಪ್ರೇರಣೆಯಿಂದ ರಕ್ತ ನೀಡಲು ಬಂದಾಗ ರಕ್ತ ದಾನ ಎಂದು ಕರೆಯಲಾಗುತ್ತದೆ. ಹಲವಾರು ಶ್ರೇಷ್ಠ ದಾನಗಳಲ್ಲಿ ರಕ್ತದಾನವು ಒಂದಾಗಿದೆ. ನಮ್ಮ ದೇಹದ ನರ ನಾಡಿಯಲ್ಲಿ ಹರಿಯುವ ರಕ್ತವನ್ನು ದಾನ ಮಾಡಿದರೆ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಯಬಹುದು.  ರಕ್ತದಾನದ ಕುರಿತಾದ ವಿಶೇಷ ಮಾಹಿತಿ ನಿಮಗಾಗಿ…

18 ರಿಂದ 60 ವರ್ಷ ವಯಸ್ಸಿನ, 50 ಕೆಜಿಗಿಂತ ಹೆಚ್ಚು ತೂಕ ಹೊಂದಿದವರು ರಕ್ತದಾನ ಮಾಡಬಹುದು.
ಎಚ್ ಐವಿ, ಕ್ಯಾನ್ಸರ್, ಅಸ್ತಮಾ, ಕ್ಷಯ, ರೇಬೀಸ್, ಮಧುಮೇಹ ಕಾಯಿಲೆಗಳಿಂದ ಬಳಲುತ್ತಿರುವವರು ರಕ್ತದಾನ ಮಾಡುವಂತಿಲ್ಲ.
ರಕ್ತದಲ್ಲಿ ಹಿಮೋಗ್ಲೊಬಿನ್ ಪ್ರಮಾಣ 12.5 ಗ್ರಾಮ್ ಇದ್ದರೆ ಮಾತ್ರ ರಕ್ತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ರಕ್ತದಾನ ಮಾಡುವ ವ್ಯಕ್ತಿಯ ನಾಡಿಮಿಡಿತ ನಿಮಿಷಕ್ಕೆ 50-100 ಇರಬೇಕು.
ಒಮ್ಮೆ ರಕ್ತದಾನ ಮಾಡಿದ ಮೇಲೆ ಕನಿಷ್ಠ 56 ದಿನದ ನಂತರವೇ ರಕ್ತದಾನ ಮಾಡಬಹುದು.
ರಕ್ತದಾನ ಮಾಡುವವರು ಮದ್ಯಪಾನ ಮಾಡಿರಬಾರದು.

ರಕ್ತದಾನದ ನಂತರ ಏನುಮಾಡಬೇಕು?
ರಕ್ತದಾನ ಮಾಡಿದ ನಂತರ ೨೦ ನಿಮಿಷಗಳ ಕಾಲ ಯಾವುದೇ ಕೆಲಸ ಮಾಡಬಾರದು . ಬಳಿಕ ಲೋಟ ಹಣ್ಣಿನ ರಸ ಸೇವಿಸಬೇಕು. ಹೀಗೆ ಮಾಡಿದರೆ ಮಾತ್ರ ನೀವು ಆರೋಗ್ಯದಿಂದ ಇರಲು ಸಾಧ್ಯ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Gadgets
State
Astrology
Cricket Score
Poll Questions