ಅನುಮತಿಯಿಲ್ಲದೆ ಆಧಾರ್ ತಿದ್ದುಪಡಿ, ಜೆಡಿಎಸ್ ಮುಖಂಡನ ಮನೆ ಮೇಲೆ ದಾಳಿ


Thursday, July 12th, 2018 1:43 pm

ಮಂಗಳೂರು: ಸರ್ಕಾರಿ ಅನುಮತಿಯಿಲ್ಲದೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡುತ್ತಿದ್ದ ಜೆಡಿಎಸ್ ಮುಖಂಡನೋರ್ವನ ಮನೆಯ ಮೇಲೆ ಬಂಟ್ವಾಳ ತಹಶೀಲ್ದಾರ್ ದಾಳಿ ಮಾಡಿದ್ದಾರೆ.

ದಾಳಿ ವೇಳೆ ಪತ್ತೆಯಾದ ಆಧಾರ್ ತಿದ್ದುಪಡಿಗೆ ಬಳಸುತ್ತಿದ್ದ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದ.ಕ. ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಹಾರೂನ್ ರಶೀದ್ ಎಂಬುವರ ಮನೆ ಮೇಲೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಜೆಡಿಎಸ್​ ಮುಖಂಡನ ಮನೆಯಲ್ಲಿ ಫ್ರಾನ್ಸಿಸ್ ಪ್ರಶಾಂತ್ ಒಳಮೊಗರು ಎಂಬ ಆಪರೇಟರ್​ನನ್ನು ಬಳಸಿಕೊಂಡು ಆಧಾರ್ ತಿದ್ದುಪಡಿ ಮಾಡುತ್ತಿರುವುದು ಕಂಡುಬಂದಿದೆ. ಪ್ರಶಾಂತ್ ಆಧಾರ್ ಕಾರ್ಡ್ ನೋಂದಣಿ ಮಾಡುವ ಬಗ್ಗೆ ತರಬೇತಿ ಪಡೆದಿದ್ದ ಎನ್ನಲಾಗಿದೆ.

ಮನೆಯಲ್ಲಿದ್ದ ಪ್ರಿಂಟರ್, ಸ್ಕ್ಯಾನರ್ ಹಾಗೂ ಇತರ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡಿರುವ ಬಂಟ್ವಾಳ ತಹಶೀಲ್ದಾರ್ ಪರವಾನಿಗೆ ಇಲ್ಲದೇ ಖಾಸಗಿ ಮನೆಯಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿಯನ್ನು ಮಾಡುತ್ತಿರುವ ಬಗ್ಗೆ ವರದಿ ನೀಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions