ಈ ಆರು ಬ್ರೇಕ್ ಫಾಸ್ಟ್ ಫಾಟಾ ಫಟ್ ಆಗಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತೆ


Saturday, June 23rd, 2018 11:12 am

ಸ್ಪೆಷಲ್ ಡೆಸ್ಕ್ : ನೀವು ತೂಕ ಕಳೆದುಕೊಳ್ಳಲು ಬಯಸಿದರೆ ಪ್ರತಿದಿನ ಮುಂಜಾನೆಯನ್ನು ಆರೋಗ್ಯಕರ ಆಹಾರ ಸೇವನೆ ಮಾಡುವುದರಿಂದ ಆರಂಭಿಸಿ. ಯಾವ ರೀತಿಯ ಬ್ರೇಕ್ ಫಾಸ್ಟ್ ಸೇವಿಸಿದರೆ ತೂಕ ಕಡಿಮೆಯಾಗುತ್ತದೆ ಎಂದು ಯೋಚನೆ ಮಾಡುತ್ತಿದ್ದೀರಾ ? ಹಾಗಿದ್ರೆ ಕೇಳಿ ಆರು ಆರೋಗ್ಯಕರ ಆಹಾರದ ಬಗ್ಗೆ ಮಾಹಿತಿ ನೀಡುತ್ತೇವೆ.

ಕ್ಯುನೋವಾ ಪ್ಯಾನ್ ಕೇಕ್ : ಕ್ಯುನೋವಾ ಪ್ಯಾನ್ ಕೇಕ್ ಮಾಡಿ ಬೆಳಗ್ಗೆ ಸೇವನೆ ಮಾಡಿ, ಅದಕ್ಕೆ ಫ್ರೆಶ್ ಹಣ್ಣುಗಳನ್ನು ಹಾಕಲು ಮರೆಯಬೇಡಿ. ಇದು ತುಂಬಾ ಹೆಲ್ದಿ ಆಹಾರವಾಗಿದೆ.

ಮೊಳಕೆ ಕಾಳು : ಬೇರೆ ಬೇರೆ ವಿಧವಾದ ಕಾಳುಗಳನ್ನು ತೆಗೆದುಕೊಂಡು ಮೊಳಕೆ ಬಾರಿಸಿ. ಮೊಳಕೆ ಕಾಳಿನಲ್ಲಿ ಫೈಬರ್, ಪ್ರೊಟೀನ್, ವಿಟಾಮಿನ್, ಮಿನರಲ್ಸ್ ಮತ್ತು ಆಂಟಿ ಆಕ್ಸಿಡೆಂಟ್ ಗಳಿವೆ. ಇವು ಜೀರ್ಣಕ್ರಿಯೆಯನ್ನು ಸುಲಭ ಮಾಡುತ್ತದೆ.

ಓಟ್ ಮಿಲ್ : ಹೆಚ್ಚಿನ ಫೈಬರ್ ಅಂಶ ಹೊಂದಿದ ಮತ್ತೊಂದು ಉಪಹಾರ ಓಟ್ ಮಿಲ್. ಇದು ತುಂಬಾ ಸಮಯದವರೆಗೆ ನಿಮಗೆ ಹಸಿವು ಆಗದಂತೆ ಕಾಪಾಡುತ್ತದೆ. ಎಕ್ಸರ್ ಸೈಜ್ ಮಾಡುವ ಮೂರು ಗಂಟೆ ಮೊದಲು ಇದನ್ನು ಸೇವನೆ ಮಾಡಿದರೆ ಕೊಬ್ಬು ಬೇಗನೆ ಕರಗುತ್ತದೆ.

ಪಾಲಕ್ ಪ್ಯಾನ್ ಕೇಕ್ : ಗೋಧಿ ಹಿಟ್ಟು, ಹಾಲು, ಮೊಸರು, ಪಾಲಕ್ ಸೇರಿಸಿ ಮಾಡಿದ ಮಶ್ರೂಮ್ ಮತ್ತು ಚೀಸ್ ಫಿಲ್ಲಿಂಗ್ ಇರುವ ಪ್ಯಾನ್ ಕೇಕ್ ತಿನ್ನಲು ಯಮ್ಮಿಯಾಗಿರುತ್ತದೆ. ಜೊತೆಗೆ ತೂಕ ಇಳಿಕೆಗೆ ಉತ್ತಮ ಆಹಾರವಾಗಿದೆ.

ಓಟ್ ಆಪಲ್ ಕ್ರಂಬಲ್ : ಬೆಳಗ್ಗೆ ಎದ್ದ ಕೂಡಲೇ ಸೇವಿಸಲು ಇದು ಬೆಸ್ಟ್ ಆಹಾರವಾಗಿದೆ. ಇವೆರಡರ ಮಿಶ್ರಣಕ್ಕೆ ದಾಲ್ಚಿನ್ನಿ ಹಾಕಿ ಸೇವಿಸಿದರೆ ಚೆನ್ನಾಗಿರುತ್ತದೆ.

ಫ್ರೆಚ್ ಟೋಸ್ಟ್ ಜೊತೆಗೆ ಮಸ್ಕ್ ಮೆಲನ್ ಸಲಾಡ್ : ಮೊಟ್ಟೆ ಇಷ್ಟ ಪಡುವವರಿಗೆ ಇದೊಂದು ಬೆಸ್ಟ್ ಬ್ರೇಕ್ ಫಾಸ್ಟ್ ಆಗಿದೆ. ಜೊತೆಗೆ ಮಾಸ್ಕ ಮೆಲನ್ ಹಾಗೆ ತಿಂದೆ ಬೆಸ್ಟ್ ಮಾರ್ನಿಂಗ್ ನಿಮ್ಮದಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions