ಸುಭಾಷಿತ :

Monday, September 23 , 2019 3:55 PM

ಥ್ರಿಲ್ಲರ್ ವೀಕೆಂಡ್‍ಗಿದೆಯಾ ಹಾರರ್ ಟಚ್?


Wednesday, May 22nd, 2019 9:14 am

ಸಿನಿಮಾಡೆಸ್ಕ್: ಮಿಲಿಂದ್ ಮತ್ತು ಸಂಜನಾ ಬುರ್ಲಿ ಮುಖ್ಯಭೂಮಿಕೆಯಲ್ಲಿರುವ ವೀಕೆಂಡ್ ಚಿತ್ರ ಈ ವಾರವೇ ರಾಜ್ಯಾಧ್ಯಂತ ತೆರೆ ಕಾಣುತ್ತಿದೆ. ಒಂದು ಸಿನಿಮಾ ಪ್ರೇಕ್ಷಕರ ನಡುವೆ ತಾನೇ ತಾನಾಗಿ ಚರ್ಚೆಗೀಡಾದರೆ, ಈ ಮೂಲಕವೇ ನಾನಾ ದಿಕ್ಕಿನಿಂದ ಕುತೂಹಲಗಳು ಹುಟ್ಟಿಕೊಂಡರೆ ಗೆಲುವು ಸಲೀಸಾದಂತೆಯೇ. ಈ ನಿಟ್ಟಿನಲ್ಲಿ ನೋಡ ಹೋದರೆ ವೀಕೆಂಡ್ ಚಿತ್ರವೂ ಕೂಡಾ ಗೆಲುವಿನ ಹಾದಿಯಲ್ಲಿದೆ.

ಇಂಥಾದ್ದೊಂದುಯ ಸಕಾರಾತ್ಮಕ ಅಂಶಗಳೊಂದಿಗೇ ಥೇಟರಿನತ್ತ ಹೊರಟಿರೋ ಈ ಚಿತ್ರವನ್ನು ಶೃಂಗೇರಿ ಸುರೇಶ್ ನಿರ್ದೇಶನ ಮಾಡಿದ್ದಾರೆ. ಡಿ ಮಂಜುನಾಥ್ ಅವರು ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಈ ತಲೆಮಾರಿನ ಯುವ ಸಮುದಾಯದ ತಲ್ಲಣಗಳ ಕಥೆ ಹೊಂದಿರೋ ಈ ಸಿನಿಮಾ ಕುಟುಂಬ ಸಮೇತರಾಗಿ ನೋಡುವಂತೆ ಮೂಡಿ ಬಂದಿದೆಯಂತೆ.

ವೀಕೆಂಡ್ ಎಂಬ ಶಬ್ಧ ಕಿವಿ ಸೋಕಿದರೆ ಜನಸಾಮಾನ್ಯರ ಕಣ್ಣುಗಳಲ್ಲಿ ಉಲ್ಲಾಸದ ಚಿತ್ರಗಳೇ ಪುಟಿದೇಳುತ್ತವೆ. ಆದರೆ ಈ ವೀಕೆಂಡ್ ಮೋಜಿನ ಸುಳಿಗೆ ಸಿಕ್ಕು ಅದೆಷ್ಟೋ ಮಂದಿ ಕಂಗಾಲಾಗಿದ್ದೂ ಇದೆ. ಬದುಕು ಬರ್ಬಾದೆದ್ದ ದುರಂತಗಳೂ ಇವೆ. ಇಂಥಾ ಅನೇಕ ಸಂಗತಿಗಳನ್ನಿಟ್ಟುಕೊಂಡು ಬದುಕಿಗೆ ಹತ್ತಿರಾದ ಕಥೆಯನ್ನಿಲ್ಲಿ ಹೇಳಲಾಗಿದೆಯಂತೆ.

ಅಂದಹಾಗೆ ಇತ್ತೀಚೆಗೆ ಈ ಚಿತ್ರದ ಸುತ್ತಾ ನಾನಾ ಊಹಾ ಪೋಹಗಳೂ ಕೇಳಿ ಬರಲಾರಂಭಿಸಿವೆ. ಇದೊಂದು ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಚಿತ್ರವೆಂಬ ವಿಚಾರವನ್ನು ಚಿತ್ರತಂಡವೇ ಜಾಹೀರು ಮಾಡಿದೆ. ಆದರೆ ವೀಕೆಂಡಿನಲ್ಲಿ ಬೆಚ್ಚಿ ಬೀಳಿಸುವಂಥಾ ಹಾರರ್ ಅಂಶಗಳೂ ಇರ ಬಹುದಾ ಎಂಬ ಬಗ್ಗೆ ಪ್ರೇಕ್ಷಕರ ವಲಯದಲ್ಲಿಯೇ ಚರ್ಚೆಗಳಿಗೆ ಚಾಲನೆ ಸಿಕ್ಕಿದೆ. ಇದೆಲ್ಲದಕ್ಕೂ ಈ ವಾರವೇ ನಿಖರ ಉತ್ತರ ಸಿಗಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions