ಸುಭಾಷಿತ :

Monday, September 23 , 2019 3:52 PM

`ವೀಕೆಂಡ್’ನಲ್ಲಿ ಅನಂತ್ ನಾಗ್ ಪಾತ್ರವೇನು?


Wednesday, May 22nd, 2019 9:06 am


ಸಿನಿಮಾಡೆಸ್ಕ್: ಹಿರಿಯ ನಟ ಅನಂತ್ ನಾಗ್ ಯಾವುದೇ ಚಿತ್ರದಲ್ಲಿ ನಟಿಸಿದರೂ ಅದರ ಬಗ್ಗೆ ಜನಸಾಮಾನ್ಯರಲ್ಲಿಯೂ ಒಂದು ಆಕರ್ಷಣೆ ಇದ್ದೇ ಇರುತ್ತದೆ. ಖುದ್ದು ಚಿತ್ರರಂಗದ ಮಂದಿಯಲ್ಲಿಯೇ ಈ ಬಗ್ಗೆ ಒಂದು ಬೆರಗು ಹುಟ್ಟಿಕೊಳ್ಳುತ್ತೆ. ಯಾಕೆಂದರೆ ಅನಂತ್ ನಾಗ್ ಅವರೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆಂದರೆ ಅದರಲ್ಲಿ ಗಟ್ಟಿ ಕಥೆ ಇದೆ ಎಂದೇ ಅರ್ಥ. ಹಾಗಿದ್ದ ಮೇಲೆ ಸಾಕ್ಷಾತ್ ಅನಂತ್ ಅವರೇ ಮೆಚ್ಚಿಕೊಂಡಿರೋ ಚಿತ್ರದ ಬಗ್ಗೆ ಕುತೂಹಲ ಹುಟ್ಟದಿರುತ್ತಾ?

ಶೃಂಗೇರಿ ಸುರೇಶ್ ನಿರ್ದೇಶನದ ವೀಕೆಂಡ್ ಚಿತ್ರದ ಕಥೆಯನ್ನು ಅನಂತ್ ನಾಗ್ ಅವರು ಆರಂಭದಲ್ಲಿಯೇ ಬಹುವಾಗಿ ಮೆಚ್ಚಿಕೊಂಡಿದ್ದರು. ಈ ಖುಷಿಯಲ್ಲಿಯೇ ನಟಿಸಲು ಒಪ್ಪಿಕೊಂಡಿದ್ದ ಅವರು ಒಟ್ಟಾರೆ ಚಿತ್ರ ಮೂಡಿ ಬಂದಿರೋ ರೀತಿಯ ಬಗ್ಗೆಯೂ ಅಂಥಾದ್ದೇ ತೃಪ್ತಿ ಹೊಂದಿದ್ದಾರಂತೆ. ಚಿತ್ರೀಕರಣದ ಕಡೇಯ ದಿನ ನಿರ್ದೇಶಕರನ್ನು ಬಳಿ ಕರೆದು ಸ್ಕ್ರಿಫ್ಟ್‍ಗಿಂತಲೂ ಸಿನಿಮಾ ಚೆನ್ನಾಗಿ ಬಂದಿದೆ ಅಂತಲೂ ಬೆನ್ತಟ್ಟಿದ್ದರಂತೆ.

ಅನಂತ್ ನಾಗ್ ಸುಖಾ ಸುಮ್ಮನೆ ಹೀಗೆಲ್ಲ ಹೊಗಳಿಕೆಯ ಮಾತಾಡೋ ಜಾಯಮಾನದವರಲ್ಲ. ಒಂದು ವೇಳೆ ಸರಿಯನ್ನಿಸದಿದ್ದರೆ ಅವರು ಯಾವ ಮುಲಾಜೂ ಇಲ್ಲದೆ ಮುಖಕ್ಕೆ ಹೊಡೆದಂತೆ ಹೇಳಿ ಬಿಡುತ್ತಾರೆ. ಅಂಥಾ ಅನಂತ್ ಅವರೇ ಮೆಚ್ಚಿಕೊಂಡಿರೋದೇ ಚಿತ್ರತಂಡದ ಪಾಲಿಗೆ ಗೆಲ್ಲುವ ಸ್ಪಷ್ಟ ಸೂಚನೆಯನ್ನು ರವಾನಿಸಿದೆ. ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಡಿ ಮಂಜುನಾಥ್ ನಿರ್ದೇಶನ ಮಾಡಿರೋ ಈ ಚಿತ್ರ ಈ ವಾರವೇ ತೆರೆ ಕಾಣುತ್ತಿದೆ. ಇದರಲ್ಲಿ ಮಿಲಿಂದ್ ಮತ್ತು ಸಂಜನಾ ಬುರ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions