ಸುಭಾಷಿತ :

Monday, September 23 , 2019 3:50 PM

ಟೆಕ್ಕಿಗಳ ಲೋಕದ ನಿಗೂಢಕ್ಕೆ ಕಣ್ಣಾಗಲಿದೆಯಾ `ವೀಕೆಂಡ್’?


Wednesday, May 22nd, 2019 9:09 am

ಸಿನಿಮಾಡೆಸ್ಕ್: ವಾರ ಪೂರ್ತಿ ಬೆಂಗಳೂರಿನಂಥಾ ಸಿಟಿಗಳಲ್ಲಿ ದುಡಿಯೋ ಜೀವಗಳಿಗೆ ವೀಕೆಂಡ್ ಎಂಬುದು ಆಹ್ಲಾದಕರ ಅನುಭೂತಿ ನೀಡುತ್ತೆ. ಅದರಲ್ಲಿಯೂ ಈ ಟೆಕ್ಕಿಗಳ ಪಾಲಿಗದು ಅತ್ಯಂತ ಆಪ್ಯಾಯ ವಿದ್ಯಮಾನ. ಕೈತುಂಬಾ ಬರೋ ಕಾಸಲ್ಲಿ ಬಹು ಭಾಗವನ್ನ ಈ ವೀಕೆಂಡ್ ಮೋಜಿಗೆಂದೇ ಮೀಸಲಿಡುವವರೂ ಇದ್ದಾರೆ. ಇಂಥಾ ವೀಕೆಂಡಿನಲ್ಲೊಂದು ವಿಕ್ಷಿಪ್ತ ಜಗತ್ತೂ ಇದೆ. ಈ ವಾರ ತೆರೆ ಕಾಣಲ;ಇರೋ ವೀಕೆಂಡ್ ಚಿತ್ರ ಕೂಡಾ ಇಂಥಾ ಈ ವಾರಾತ್ಯದ ಮೋಜಿನ ವಿಕ್ಷಿಪ್ತ ಜಗತ್ತಿನತ್ತ ಕಣ್ಣಾಗಿರೋ ಸೂಚನೆ ದಟ್ಟವಾಗಿದೆ.

ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಡಿ ಮಂಜುನಾಥ್ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಶೃಂಗೇರಿ ಸುರೇಶ್ ನಿರ್ದೇಶನ ಮಾಡಿದ್ದಾರೆ. ಅನಂತ್ ನಶಾಗ್ ಪ್ರಧಾನ ಪಾತ್ರವೊಂದನ್ನು ನಿರ್ವಹಿಸಿರೋ ಈ ಚಿತ್ರದಲ್ಲಿ ಮಿಲಿಂದ್ ಮತ್ತು ಸಂಜನಾ ಬುರ್ಲಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ.

ವೀಕೆಂಡ್ ಎಂಬುದು ಲಿಮಿಟ್ಟಿನಲ್ಲಿದ್ದರೆ ಖಂಡಿತಾ ಮಜವಾದ ವಿಚಾರವೇ. ಆದರೆ ಕೆಲವರು ಈ ಮೋಜೇ ದುರಂತವಾಗುವಂತೆಯೂ ಮಾಡಿಕೊಂಡು ಬಿಟ್ಟಿರುತ್ತಾರೆ. ಅಂಥಾ ಅನೇಕ ಎಳೆಗಳನ್ನು ಸಸ್ಪೆನ್ಸ್ ಥ್ರಿಲ್ಲರ್ ಜಾನರಿನಲ್ಲಿ ಈ ಸಿನಿಮಾ ಮೂಲಕ ಹೇಳಲಾಗಿದೆಯಂತೆ. ಪ್ರೇಕ್ಷಕರನ್ನು ಸದಾ ಕುತೂಹಲದ ಉತ್ತುಂಗದಲ್ಲಿಯೇ ಪ್ರತಿಷ್ಠಾಪಿಸುವಂತೆ ಮೂಡಿ ಬಂದಿರೋ ಈ ಚಿತ್ರ ಈ ವಾರವೇ ತೆರೆ ಕಾಣುತ್ತಿದೆ. ಇಲ್ಲಿ ಹೊರ ಜಗತ್ತಿಗೆ ಗೊತ್ತಿರದ ವೀಕೆಂಡ್ ರಹಸ್ಯಗಳೂ ಇವೆಯಂತೆ.

ಶಶಿಧರ್ ಛಾಯಾಗ್ರಹಣ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ, ಮನೋಜ್ ಸಂಗೀತ ಹಾಗೂ ಅನಂತ್ ನಾಗ್, ಮಂಜುನಾಥ್, ನೀನಾಸಂ ರಘು, ಬ್ಯಾಂಕ್ ಸತೀಶ್, ನೀತು ಬಾಲಾ, ವೀಣಾ ಜಯಶಂಕರ್, ಸಂಜಯ್ ನಾಗೇಶ್, ಮಂಜುನಾಥ ಶಾಸ್ತ್ರಿ, ಗೋಪಿನಾಥ್ ಭಟ್, ನಾಗಭೂಷಣ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions