ಒಂದೇ ದಿವಸ ಇಬ್ಬರಿಗೆ ಕಲ್ಯಾಣ ಮಂಟಪ ಕೊಟ್ಟು ಯಡವಟ್ಟು : ಮಾಲೀಕ ಆತ್ಮಹತ್ಯೆ


Sunday, June 24th, 2018 12:33 pm


ಮೈಸೂರು: ಒಂದೇ ದಿನ ಇಬ್ಬರಿಗೆ ಕಲ್ಯಾಣ ಮಂಟಪ ಬಾಡಿಗೆ ನೀಡಿದ್ದ ಪರಿಣಾಮ ಎರಡೂ ಕುಟುಂಬಸ್ಥರ  ನಿಂದನೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಲಿಂಗರಾಜು(35) ಆತ್ಮಹತ್ಯೆ ಮಾಡಿಕೊಂಡಿರುವ ಕಲ್ಯಾಣ ಮಂಟಪದ ಮಾಲೀಕನಾಗಿದ್ದು. ಲಿಂಗರಾಜು ತಮ್ಮ ಕಲ್ಯಾಣ ಮಂಟಪವನ್ನು ಒಂದೇ ದಿನ ಎರಡು ಕುಟುಂಬದವರಿಗೆ ಬಾಡಿಗೆಗೆ ನೀಡಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಇದರಿಂದ ಮೂವರ ನಡುವೆ ಗೊಂದಲ ಉಂಟಾಗಿ ಜಗಳ ನಡೆದಿತ್ತು. ಲಿಂಗರಾಜು ಅವರನ್ನು ಎರಡೂ ಕುಟುಂಬದವರು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಮನನೊಂದ ಮಾಲೀಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎನ್.ಆರ್.ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions