ಸುಭಾಷಿತ :

Monday, September 23 , 2019 3:51 PM

`ಎಕ್ಸಿಟ್ ಪೋಲ್ ಪೋಸ್ಟ್’ ಗೆ ಕೊನೆಗೂ ಕ್ಷಮೆಯಾಚಿಸಿದ ವಿವೇಕ್ ಒಬೇರಾಯ್!


Tuesday, May 21st, 2019 11:39 am

ಮುಂಬೈ : ಬಾಲಿವುಡ್ ನಟಿ ಐಶ್ವರ್ಯಾ ರೈ ಬಗ್ಗೆ ಟ್ರೋಲ್ ಮಾಡಲಾಗಿದ್ದ ಮೀಮ್ ಶೇರ್ ಮಾಡಿ ಟೀಕೆಗೆ ಗುರಿಯಾಗಿದ್ದ ನಟ ವಿವೇಕ್ ಒಬೇರಾಯ್ ಕ್ಷಮೆ ಕೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ನಟ ವಿವೇಕ್, ಕೆಲವು ಬಾರಿ ನಾವು ಮೊದಲು ನೋಡಿದಾಗ ಅದು ತಮಾಷೆಯಾಗಿ ಕಾಣಿಸುತ್ತದೆ. ಆದರೆ ಬೇರೆಯವರಿಗೆ ತಮಾಷೆಯಾಗಿ ಕಾಣಿಸುವುದಿಲ್ಲ. ನಾನು ಕಳೆದ 10 ವರ್ಷದಿಂದ ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಇದುವರೆಗೂ 2 ಸಾವಿರಕ್ಕೂ ಹೆಚ್ಚು ವಂಚಿತ ಮಹಿಳೆಯರನ್ನು ಸಮಾಜದ ಮುಂದೆ ತಂದಿದ್ದು, ಇಂದು ಎಲ್ಲರೂ ಸಂತೋಷದ ಜೀವನ ನಡೆಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ, ನನ್ನ ರಿಪ್ಲೈನಿಂದ ಯಾವುದಾದರೂ ಮಹಿಳೆಯರ ಭಾವನೆಗೆ ಧಕ್ಕೆ ತಂದಿದ್ದರೆ. ತಪ್ಪನ್ನು ಸುಧಾರಿಸಿಕೊಳ್ಳಲು ನನ್ನನ್ನು ಕ್ಷಮಿಸಿ ಬಿಡಿ ಎಂದು ಬರೆದು ಟ್ವೀಟ್ ಮಾಡಿದಲ್ಲದೇ ನಾನು ಹಿಂದಿನ ಟ್ವೀಟ್ ಡಿಲೀಟ್ ಮಾಡುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

ಎಕ್ಸಿಟ್ ಪೋಲ್ ಬೆನ್ನಲ್ಲೇ ವಿವೇಕ್ ಒಂದು ಫೋಟೋದಲ್ಲಿ 3 ಫ್ರೇಮ್ ಗಳನ್ನು ಮಾಡಿ ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಸಂಬಂಧವನ್ನು ಎಕ್ಸಿಟ್ ಪೋಲ್ ಗೆ ಹೋಲಿಸಿ ಟ್ರೋಲ್ ಮಾಡಲಾಗಿತ್ತು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions