ವಿಜಯ್ ಗೆ ‘ಚಮಕ್’ ಬೆಡಗಿ ರಶ್ಮಿಕಾ ಮಂದಣ್ಣ ಕೊಟ್ಟ ಗಿಫ್ಟ್ ಏನು ಗೊತ್ತಾ..?


Sunday, May 12th, 2019 7:54 pm

ಸಿನಿಮಾ ಡೆಸ್ಕ್ : ಗೀತಗೋವಿಂದಂ ಸಿನಿಮಾದ ಮೂಲಕ ಸಿನಿ ರಸಿಕರ ಮನ ಗೆದ್ದ ವಿಜಯ್ ದೇವರಕೊಂಡ ​ರಶ್ಮಿಕಾ ಮಂದಣ್ಣ  ಜೋಡಿ ಕ್ಯೂಟ್ ಪೇರ್ ಎನಿಸಿಕೊಂಡಿದ್ದಾರೆ.

ಇತ್ತೀಚೆಗೆ  ತೆಲುಗು ನಟ ದೇವರಕೊಂಡ ಅವರ ಹುಟ್ಟು ಹಬ್ಬದ  ಹಿನ್ನೆಲೆಯಲ್ಲಿ ನಟಿ ​-ರಶ್ಮಿಕಾ ಮಂದಣ್ಣ  ವಿಜಯ್ ಗೆ ಡಿಯರ್ ಬಾಬಿ ಎಂದು ಕರೆಯುವ ಮೂಲಕ ಹುಟ್ಟು ಹಬ್ಬದ ವಿಶಸ್ ತಿಳಿಸಿದ್ದರು. ಅಷ್ಟೆ ಅಲ್ಲದೇ ರಶ್ಮಿಕಾ ಮಂದಣ್ಣ ವಿಜಯ್ ಗೆ ಬ್ರೇಸ್ ಲೆಟ್ ಗಿಫ್ಟ್ ಆಗಿ ಕೊಟ್ಟಿದ್ದಾರೆ.

ನಟ ವಿಜಯ್ ದೇವರಕೊಂಡ ಅವರು ಮೇ 9 ಕ್ಕೆ 30 ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಅಲ್ಲದೇ ರಶ್ಮಿಕಾ ಮಂದಣ್ಣ  ಅವರು ಟ್ವೀಟ್ ಮಾಡುವ ಮೂಲಕ ವಿಜಯ್ ಅವರಿಗೆ ಡಿಯರ್ ಬಾಬಿ ಹ್ಯಾಪಿಯೆಸ್ಟ್ ಬರ್ತ್ ಡೇ ಟು ಯೂ ಎಂದು ಬರೆದು ಅವರ ಫೋಟೋವನ್ನು ಪೋಸ್ಟ್ ಮಾಡಿದ್ದರು.  ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ ಅದೃಷ್ಟದ ಕದ ತಟ್ಟಿದ  ರಶ್ಮಿಕಾ ಮಂದಣ್ಣ ನಂತರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಅದೃಷ್ಟವೆಂಬಂತೆ ಅವರು ನಟಿಸಿದ್ದ ಸಿನಿಮಾಗಳು ಸೂಪರ್ ಹಿಟ್ ಆಯಿತು. ಕನ್ನಡವಲ್ಲದೇ ತೆಲುಗು ಸಿನಿಮಾಗಳಲ್ಲೂ ನಟಿಸುವ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ರಶ್ಮಿಕಾ ಮಂದಣ್ಣ ಅವರು ಸಂಪಾದಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions