ಸುಭಾಷಿತ :

Sunday, January 26 , 2020 4:20 AM

ಬ್ರೇಕ್ ಅಪ್ ಬಗ್ಗೆ ರಶ್ಮಿಕಾರನ್ನು ಪ್ರಶ್ನಿಸಿದ್ದಕ್ಕೆ ವಿಜಯ್ ರಿಯಾಕ್ಷನ್ ಹೇಗಿತ್ತು ನೋಡಿ..?


Tuesday, July 16th, 2019 9:08 pm

ಸಿನಿಮಾ ಡೆಸ್ಕ್ : ಗೀತಗೋವಿಂದಂ ಸಿನಿಮಾದ ಸಿನಿ ರಸಿಕರ ಮನ ಗೆದ್ದ ವಿಜಯ್ ದೇವರಕೊಂಡರಶ್ಮಿಕಾ ಮಂದಣ್ಣಡಿಯರ್ ಕಾಮ್ರೇಡ್‘  ಸಿನಿಮಾದ ಮೂಲಕ ಮತ್ತೆ ತೆರೆ ಮೇಲೆ ಒಂದಾಗಿದ್ದು, ಚಿತ್ರದ ಟ್ರೇಲರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ.

ತೆಲುಗು ನಟ ವಿಜಯ್​ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ನಡುವೆ ಲವ್ವಿಡವ್ವಿ ಇದೆ ಎಂಬ ವಿಚಾರವಾಗಿ ಕಳೆದೊಂದು ವರ್ಷದಿಂದ ಈ ಜೋಡಿ ಸಾಕಷ್ಟು ಸುದ್ದಿಯಲ್ಲಿದೆ. ಈ ನಡುವೆ ನಟ ರಕ್ಷಿತ್​ ಶೆಟ್ಟಿ ಜತೆಗಿನ ಬ್ರೇಕ್​ಅಪ್ ಬಗ್ಗೆ​ ರಶ್ಮಿಕಾರನ್ನು ಪ್ರಶ್ನಿಸಿದ್ದಕ್ಕೆ  ವಿಜಯ್ ದೇವರಕೊಂಡ ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ..

ಈ ಬಗ್ಗೆ ಮಾತನಾಡಿರುವ ದೇವರಕೊಂಡ ನಿಮ್ಮ ಪ್ರಶ್ನೆ ಕುರಿತು ಈಗಲೂ ನನಗೆ ತಿಳಿದಿಲ್ಲ. ಆದರೆ, ಇದು ಯಾರ ವ್ಯವಹಾರವೂ ಅಲ್ಲ. ನಾನು ನಿಮಗೆ ಉತ್ತರ ನೀಡುತ್ತಿರುವಂತೆ ನಿಮ್ಮ ಪ್ರಶ್ನೆ ನನಗಿನ್ನೂ ಅರ್ಥವಾಗಿಲ್ಲ ಎಂದಿದ್ದಾರೆ.   ಈ ಬಗ್ಗೆ ರಶ್ಮಿಕಾ ಕೂಡ ಪ್ರತಿಕ್ರಿಯೆ ನೀಡಿ, ನನಗೂ ಕೂಡ ಇದು ದೀರ್ಘಕಾಲದ ಪ್ರಶ್ನೆಯಾಗಿದೆ ಪದೇಪದೆ ಇದೇ ಪ್ರಶ್ನೆಯನ್ನು ಕೇಳಬೇಡಿ ಎಂದಿದ್ದಾರೆ.

ಇನ್ನೂ ರಕ್ಷಿತ್​ ಹಾಗೂ ರಶ್ಮಿಕಾ 2017ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡು ಇಬ್ಬರ ಪ್ರೇಮವನ್ನು ಖಚಿತಪಡಿಸಿದ್ದರು. ಆದರೆ, ತೆಲುಗು ಚಿತ್ರರಂಗಕ್ಕೆ ರಶ್ಮಿಕಾ ಪ್ರವೇಶ ನೀಡಿದ್ದೇ ತಡ ಕೆಲ ದಿವಸಗಳಲ್ಲೇ ವೈಯಕ್ತಿಕ ಕಾರಣ ನೀಡಿ ಇಬ್ಬರು ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದರು.

ಗೀತಗೋವಿಂದಂ ಚಿತ್ರದಲ್ಲಿ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದ ಈ ಜೋಡಿ ಈ ಚಿತ್ರದಲ್ಲಿ ಮತ್ತೆ ಲಿಪ್​ಲಾಕ್ ಮಾಡಿದ್ದಾರೆ. ಈ ಚಿತ್ರವನ್ನು ಭರತ್​ ಕಮ್ಮ ಕಥೆ ಬರೆದು ನಿರ್ದೇಶಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್​ ಹಾಗೂ ಬಿಗ್​ ಬೆನ್ ಸಿನಿಮಾಸ್ ‘ಡಿಯರ್ ಕಾಮ್ರೇಡ್’ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿ ಮಾಡಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions