ಸುಭಾಷಿತ :

Thursday, January 23 , 2020 6:00 PM

ಅಚ್ಚರಿ ಆದರೂ ಸತ್ಯ! ಈ ವ್ಯಕ್ತಿಯ ತಲೆಮೇಲೆ ಬೆಳೆಯುತ್ತಿದೆ ಕೊಂಬು!


Saturday, September 14th, 2019 10:54 am

ಭೋಪಾಲ್ : ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ಅಪರೂಪದ ಸಮಸ್ಯೆಯಿಂದ ಬಳಲುತ್ತಿದ್ದು, ತಲೆಯ ಮೇಲೆ ಕೊಂಬು ಬೆಳೆಯುತ್ತಿದೆ.

ಹೌದು, ಮಧ್ಯಪ್ರದೇಶದ ರಹ್ಲಿ ಗ್ರಾಮದ ಶ್ಯಾಮ್ ಲಾಲ್ ಯಾದವ್ ಹಲವು ವರ್ಷಗಳಿಂದ ಈ ಅಪರೂಪದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕತ್ತರಿಸಿಕೊಂಡಷ್ಟು ಬೆಳೆಯುತ್ತಿದ್ದ ಕೊಂಬನ್ನು ನೋಡಿ ಆತಂಕಗೊಂಡ ಶ್ಯಾಮ್ ಲಾಲ್ ಅವರು ಬಳಿಕ ವೈದ್ಯರ ಬಳಿ ತೆರಳಿದ್ದಾರೆ. ಆದರೆ ವೈದ್ಯರಿಗೂ ಅದಕ್ಕೆ ಮೊದಲು ಕಾರಣ ಗೊತ್ತಾಗಲಿಲ್ಲ. ಹಾಗೇ ಏನು ಪರಿಹಾರ ಮಾಡಬೇಕು ಎಂದು ಅರ್ಥವಾಗಲಿಲ್ಲ. ಅಂತೂ ಈಗ ಶಸ್ತ್ರ ಚಿಕಿತ್ಸೆ ಮೂಲಕ ಶ್ಯಾಮ್ ಲಾಲ್ ಯಾದವ್ ತಲೆಯ ಮೇಲಿದ್ದ ಕೊಂಬನ್ನು ತೆಗೆಯಲಾಗಿದೆ.

ಶ್ಯಾಮ್ ಲಾಲ್ ಯಾದವ್ ಅವರು ಸೆಬಾಸಿಯಸ್ ಗ್ರಂಥಿಗೆ ಸಂಬಂಧಪಟ್ಟ ಹಾರ್ನ್ ಕಂಡಿಷನ್ ನಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಇದ್ದವರಿಗೆ ಸೂರ್ಯನ ಬಿಸಿಲು ನೇರವಾಗಿ ತಗುಲುವ ಚರ್ಮದ ಭಾಗದಲ್ಲಿ ಹೀಗೆ ಕೊಂಬುಗಳು ಉಂಟಾಗುವ ಸಾಧ್ಯತೆ ಇರುತ್ತದೆ.ಇದನ್ನು ಸೆಬಾಸಿಯಸ್ ಹಾರ್ನ್ ಅಥವಾ ಡೆವಿಲ್ ಹಾರ್ನ್ ಎಂದೇ ಕರೆಯಲಾಗುತ್ತದೆ ಎಂದು ಚಿಕಿತ್ಸೆ ನೀಡಿದ ವೈದ್ಯ ವಿಶಾಲ್ ಗಜ್ಛಿಯ ತಿಳಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions