ಸುಭಾಷಿತ :

Monday, September 23 , 2019 3:51 PM

ದಿಕ್ಕು ಬದಲಿಸಿದ ‘ವಾಯು’ : ಅಪಾಯದಿಂದ ಗುಜರಾತ್ ಪಾರು


Friday, June 14th, 2019 7:57 pm

ಗಾಂಧಿ ನಗರ :  ಗುಜರಾತ್ ರಾಜ್ಯದ ತೀರ ಪ್ರದೇಶಗಳಿಗೆ ಅಪ್ಪಳಿಸಲಿದೆ ಎನ್ನಲಾಗಿದ್ದ ವಾಯು ಚಂಡಮಾರುತದ ದಿಕ್ಕು ಬದಲಿಸಿದ್ದು, ರಾಜ್ಯ ಅಪಾಯದಿಂದ ಪಾರಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ,

ವಾಯು ಚಂಡಮಾರುತದ ಮುಂಜಾಗೃತಾ ಕ್ರಮವಾಗಿ ತೀರ ಭಾಗದ ಜಿಲ್ಲೆಗಳಿಂದ ಮೂರು ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ವಿಮಾನಗಳ ಸಂಚಾರ ಹಾಗೂ ರೈಲು ಸಂಚಾರ ಕೂಡ ರದ್ದು ಪಡಿಸಲಾಗಿತ್ತು. ಹಾಗೂ ಸ್ಥಳಾಂತರಗೊಂಡವರ ನೆರವಿಗೆ ಅಗತ್ಯ ಹಣಕಾಸು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನೂ ಚಂಡಮಾರುತದಿಂದ ಹೆಚ್ಚು ಹಾನಿ ಉಂಟಾಗಬಹುದು ಎಂದು 10 ಸ್ಥಳಗಳಲ್ಲಿ ನಿಯೋಜಿಸಿದ್ದ ಸಚಿವರು ಮತ್ತು ಅಧಿಕಾರಿಗಳನ್ನು ಹಿಂದಕ್ಕೆ ಮರಳುವ ಸೂಚಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ..ಇನ್ನೂ ಶಾಲೆಗಳು ನಾಳೆ ಪುನಾರಂಭಗೊಳ್ಳಲಿದೆ ಎಂದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions