ಈ ಐದು ವಸ್ತುಗಳು ಮನೆಯಲ್ಲಿದ್ದರೆ ಕೂಡಲೇ ಅದನ್ನು ಬಿಸಾಕಿ ಇಲ್ಲ ಅಂದ್ರೆ ….


Saturday, December 8th, 2018 9:53 am

ಸ್ಪೆಷಲ್ ಡೆಸ್ಕ್ : ಕೆಲವೊಂದು ವಸ್ತುಗಳು ಮನೆಯಲ್ಲಿ ಇದ್ದಾರೆ ಅದರಿಂದ ಮನೆಗೆ ಕೆಟ್ಟದಾಗುವುದೇ ಹೆಚ್ಚು. ಇದರಿಂದ ಮನೆಯಲ್ಲಿ ನಕಾರಾತ್ಮಕ ಎನರ್ಜಿ ಆವರಿಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ವೈಜ್ಞಾನಿಕವಾಗಿ ಇದನ್ನು ನೋಡಿದಾಗ ಅದು ಸಹ ನಿಜ ಎಂದೆನಿಸುತ್ತದೆ.

ಮುರಿದ ದೇವರಮೂರ್ತಿ : ದೇವಿ -ದೇವತೆಯರ ತುಂಡಾದ ಮೂರ್ತಿಯನ್ನು ಪೂಜೆ ಮಾಡಬಾರದು. ಯಾವ ಮೂರ್ತಿಯನ್ನು ಸಹ ತುಂಡಾದರೆ ಪೂಜೆ ಮಾಡಬಾರದು. ಅಷ್ಟೇ ಯಾಕೆ ಹರಿದು ಹೋದ ದೇವರ ಫೋಟೋವನ್ನು ಸಹ ಮನೆಯಲ್ಲಿ ಇಡಬಾರದು.

ತುಂಡಾದ ಕನ್ನಡಿ : ಹೌದು ತುಂಡಾದ ಕನ್ನಡಿಯನ್ನು ಸಹ ಮನೆಯಲ್ಲಿ ಇಡಬಾರದು. ಇದರಿಂದ ದೋಷ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆದುದರಿಂದ ತುಂಡಾದ ಕನ್ನಡಿಯನ್ನು ಬಿಸಾಕಿ.

ನಿಂತ ವಾಚ್‌ : ಹಾಳಾದ ಅಥವಾ ನಿಂತ ವಾಚ್‌‌ ಕೂಡ ಮನೆಯಲ್ಲಿ ಇಡಬಾರದು. ಯಾಕೆಂದರೆ ಗಡಿಯಾರದ ಚಲನೆಯು ನಮ್ಮ ಕುಟುಂಬದ ಉನ್ನತಿಯನ್ನು ಅವಲಂಭಿಸಿರುತ್ತದೆ. ಗಡಿಯಾರ ಸರಿಯಾಗಿರದೆ ಇದ್ದರೆ ಮನೆಯ ಸದಸ್ಯರ ಕೆಲಸ ಪೂರ್ಣಗೊಳ್ಳುವುದಿಲ್ಲ.

ಬೇಡವಾದ ಇಲೆಕ್ಟ್ರಾನಿಕ್‌ ಸಾಮಾನು : ಮನೆಯಲ್ಲಿ ಬೇಕಾಬಿಟ್ಟಿ ಹಲವಾರು ಬೇಡವಾದ ಇಲೆಕ್ಟ್ರಾನಿಕ್‌ ಸಾಮಾಗ್ರಿಗಳು ಇಟ್ಟಿರುತ್ತೇವೆ. ಅದನ್ನು ಬೇಗನೆ ಬಿಸಾಕಿ. ಇದರಿಂದ ವಾಸ್ತು ದೋಷ ಕಾಣಿಸಿಕೊಳ್ಳುತ್ತದೆ.

ಬೇಡವಾದ ವಸ್ತುಗಳು : ಪಾತ್ರೆ ಸಾಮಾನು, ಬಟ್ಟೆ ಇನ್ನಿತರ ಯಾವುದೇ ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಅದರಿಂದ ನಕಾರಾತ್ಮಕ ಎನರ್ಜಿ ತುಂಬುತ್ತದೆ. ಆದುದರಿಂದ ಸಾಧ್ಯವಾದಷ್ಟು ಬೇಡವಾದ ವಸ್ತುಗಳನ್ನು ಮನೆಯಿಂದ ಬಿಸಾಕಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions