ವರ್ಮಾ ಹೇಳಿದ ಕೆಲಸ ಮಾಡಿದ್ರೆ ನಿಮಗೆ ಸಿಗುತ್ತೆ ಬರೋಬ್ಬರಿ 10 ಲಕ್ಷ ರೂ..!


Tuesday, October 16th, 2018 6:09 pm

ಸಿನಿಮಾ ಡೆಸ್ಕ್ : ಇತ್ತೀಚಿಗಷ್ಟೆ ರಾಮ್ ಗೋಪಾಲ್ ವರ್ಮಾ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಂತೆ ಕಾಣುವ ವ್ಯಕ್ತಿಯನ್ನ ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಕೊಡ್ತೀನಿ ಅಂತ ಘೋಷಣೆ ಮಾಡಿದ್ದು ನಿಮಗೆ ಗೊತ್ತಿವ ವಿಷಯ.

ಅಂತೆಯೇ ಚಂದ್ರಬಾಬು ನಾಯ್ಡು ಅವರಂತೆ ಕಾಣುವ ವ್ಯಕ್ತಿಯನ್ನ ಹುಡುಕಿಕೊಟ್ಟ ಟಿವಿ ಸಿಬ್ಬಂದಿಗೆ ಒಂದು ಲಕ್ಷ ರೂಪಾಯಿ ಕೊಟ್ಟಿದ್ದರು. ಇದೀಗ, ಮತ್ತೊಂದು ಚಾಲೆಂಜ್ ನೀಡಿದ್ದಾರೆ.

ಗೋಪಾಲ್ ವರ್ಮಾ ತೆಲುಗು ಸೂಪರ್ ಸ್ಟಾರ್ ಎನ್.ಟಿ.ಆರ್ ಕುರಿತು ‘ಲಕ್ಷ್ಮೀಸ್ ಎನ್.ಟಿ.ಆರ್’ ಎಂಬ ಬಯೋಪಿಕ್ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ. ಈ ಚಿತ್ರದಲ್ಲಿ ಅಭಿನಯಿಸಲು ಎನ್.ಟಿ.ಆರ್ ಅವರಂತೆ ಕಾಣುವ ಕಲಾವಿದನಿಗಾಗಿ ಹುಡುಕಾಟ ನಡೆಸುತ್ತಿದ್ದು, ಈ ಬಗ್ಗೆ ವರ್ಮಾ ಆಫರ್ ನೀಡಿದ್ದಾರೆ.

ಎನ್.ಟಿ.ಆರ್ ಅವರ ಪತ್ನಿ ಲಕ್ಷ್ಮಿ ಅವರ ಕಥೆಯಂತೆ ಈ ಚಿತ್ರ ತಯಾರಿಸಲಾಗುತ್ತಿದೆ. ಆದ್ದರಿಂದ , ಲಕ್ಷ್ಮಿ ಅವರನ್ನ ಭೇಟಿ ಮಾಡುವ ವೇಳೆ ಎನ್.ಟಿ.ಆರ್ ಹೇಗೆ ಇದ್ದರೋ ಆ ರೀತಿ ಹೋಲಿಕೆ ಇರುವಂತಹ ವ್ಯಕ್ತಿಯನ್ನ ರಾಮ್ ಗೋಪಾಲ್ ವರ್ಮಾ ಹುಡುಕುತ್ತಿದ್ದಾರೆ. ಇಂತಹ ವ್ಯಕ್ತಿಯನ್ನ ಹುಡುಕಿಕೊಟ್ಟವರಿಗೆ 10 ಲಕ್ಷ ಬಹುಮಾನ ನೀಡಲಿದ್ದೇನೆ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions