ಸುಭಾಷಿತ :

Saturday, October 19 , 2019 4:31 PM

ಮೂತ್ರದ ಬಣ್ಣ ಯಾವುದು?… ನೀವು ಆರೋಗ್ಯವಾಗಿದ್ದೀರಾ… ಹೀಗೆ ಚೆಕ್ ಮಾಡಿ


Wednesday, June 19th, 2019 10:42 am

ಸ್ಪೆಷಲ್ ಡೆಸ್ಕ್ : ಮೂತ್ರದ ವಿಷಯ ಬಂದಾಗ ಯಾವತ್ತೂ ಅದನ್ನು ಕೇರ್ ಲೆಸ್ ಮಾಡಲೇಬಾರದು. ಯಾಕೆಂದರೆ ಮೂತ್ರಕ್ಕೆ ಮತ್ತು ಆರೋಗ್ಯಕ್ಕೆ ಒಂದಕ್ಕೊಂದು ಸಂಬಂಧ ಇದೆ. ಇನ್ನು ಮೂತ್ರದ ಬಣ್ಣ. ಹೌದು ಇದನ್ನು ನೀವು ಗಮನಿಸಲೇಬೇಕು. ಯಾಕೆಂದರೆ ಮೂತ್ರದ ಬಣ್ಣ ಬದಲಾದರೆ ಅದು ಅಪಾಯಕಾರಿ ಲಕ್ಷಣವೂ ಆಗಿರುತ್ತದೆ. ಆದುದರಿಂದ ಮೂತ್ರ ಆಡುವಾಗ ಬಣ್ಣ ಯಾವುದಿದೆ ಅನ್ನೋದನ್ನು ಗಮನಿಸಿ.

ಪಾರದರ್ಶಕ : ಮೂತ್ರ ವಿಸರ್ಜನೆ ಮಾಡುವಾಗ ಪಾರದರ್ಶಕವಾಗಿದ್ದರೆ ಹೆಚ್ಚಿನ ಪ್ರಮಾಣದ ನೀರು ಕುಡಿಯುತ್ತೀರೆಂದರ್ಥ.

ತಿಳಿ ಹಳದಿ: ಈ ಬಣ್ಣದಲ್ಲಿದ್ದರೆ ಅದು ನಾರ್ಮಲ್. ಆರೋಗ್ಯಯುತವಾಗಿರುವ ಲಕ್ಷಣ.

ಡಾರ್ಕ್ ಹಳದಿ:  ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಹೆಚ್ಚು ನೀರು ಕುಡಿಯಬೇಕು. ಇಲ್ಲವಾದರೆ ಉರಿ ಮೂತ್ರ ಆರಂಭವಾಗುತ್ತದೆ.

ಕಂದು ಬಣ್ಣ: ದೇಹಕ್ಕೆ ಬೇಕಾದಷ್ಟು ನೀರು ಸಿಗದಿದ್ದರೆ ಈ ರೀತಿ ಬಣ್ಣಕ್ಕೆ ತಿರುಗುತ್ತದೆ. ಆದುದರಿಂದ ಸರಿಯಾಗಿ ನೀರು ಪಾನೀಯ ಸೇವನೆ ಅಗತ್ಯ. ಇದು ಲಿವರ್ ಸಮಸ್ಯೆಯೂಆ ಲಕ್ಷಣವೂ ಆಗಿರುತ್ತದೆ.

ಗುಲಾಬಿ ಬಣ್ಣ : ಬೀಟ್ ರೂಟ್ ಜ್ಯೂಸ್ ಸೇವಿಸಿದರೆ ಈ ಬಣ್ಣದಲ್ಲಿ ಮೂತ್ರ ವಿಸರ್ಜನೆಯಾಗುತ್ತದೆ. ಇದಲ್ಲದೆ ಮೂತ್ರದಲ್ಲಿ ರಕ್ತ ಹೋಗುತ್ತಿರುವ ಸಾಧ್ಯತೆ ಇದೆ. ಇದು ಕಿಡ್ನಿ ಸಮಸ್ಯೆ, ಮೂತ್ರ ನಾಳದ ಸೋಂಕು, ಟ್ಯೂಮರ್ ಲಕ್ಷಣ ಕೂಡ ಆಗಿರುವ ಸಾಧ್ಯತೆ ಇದೆ.

ನೀಲಿ ಅಥವಾ ಹಸಿರು: ಮೂತ್ರ ನಾಳದಲ್ಲಿ ಬ್ಯಾಕ್ಟೀರಿಯಾ ಇನ್ಫೆಕ್ಷನ್ ಇದ್ದರೆ ಮೂತ್ರ ಈ ಬಣ್ಣಕ್ಕೆ ತಿರುಗುತ್ತದೆ. ಇಂತಹ ಬಣ್ಣದಲ್ಲಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions