ಇಲ್ಲಿ ಮರಗಳಲ್ಲಿ ಹಣ ಸಿಗುತ್ತೆ..! ಅದೆಲ್ಲಿದೆ ಗೊತ್ತೇ..?


Monday, February 12th, 2018 3:43 pm

ಸ್ಪೆಷಲ್ ಡೆಸ್ಕ್: ಒಂದು ಸಾಮಾನ್ಯ ಮಾತಿದೆ. ನಾನೇನು ಹಣದ ಮರ ಇಟ್ಟುಕೊಂಡಿದ್ದೇನಾ..? ಅಥವಾ ಮರದಿಂದ ಹಣ ಉದುರಿ ಬೀಳುತ್ತಾ..? ಎಂಬುದು. ಹಣ ಮರದಲ್ಲಿ ಸಿಗಲ್ಲ. ಸಂಪಾದಿಸಿದರೇ ಮಾತ್ರ ಸಿಗುತ್ತದೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ.

ಆದರೆ ಇಲ್ಲೊಂದು ಕಡೆ ಮರಗಳಲ್ಲಿ  ಹಣ ಸಿಗುತ್ತದೆ. ಆದರೆ ಅವು ಕಾಯಿಗಳು, ಹಣ್ಣಿನ ರೂಪದಲ್ಲಿ ಅಲ್ಲ..! ಈ ಮರಗಳು ಎಲ್ಲಿವೆ ಗೊತ್ತಾ..?  ನೀವು ಇಂಗ್ಲೆಂಡ್ ಗೆ ಹೋದರೆ ವುಡ್ ಲ್ಯಾಂಡ್ ಎಂಬ ಪ್ರದೇಶ ಸಿಗುತ್ತದೆ. ಇಲ್ಲಿ ನೂರು ವರ್ಷಗಳ ಹಿಂದೆ ಸ್ಥಳೀಯರು ಇಲ್ಲಿರುವ ಅನೇಕ ಮರಗಳ ಮೇಲೆ ಅಂದರೆ ಅವುಗಳ ಕಾಂಡಗಳ ಮೇಲೆ ನಾಣ್ಯಗಳನ್ನು ಇಡುತ್ತಿದ್ದರು. ಈ ರೀತಿ ಮಾಡಲು ಒಂದು ಕಾರಣ ಇದೆ. ಆಯಾ ಗಿಡಗಳ ಮೇಲೆ ದೈವ ಸಂಬಂಧಿ ಆತ್ಮಗಳು ಇರುತ್ತವೆ ಎಂಬುದು ಅವರ ನಂಬಿಕೆಯಾಗಿತ್ತು.‌ ಹೀಗಾಗಿ ಆ ಮರಗಳ ಕಾಂಡಗಳ ಮೇಲೆ ನಾಣ್ಯಗಳನ್ನು ಚುಚ್ಚುತ್ತಿದ್ದರು. ಆ ರೀತಿ ಮಾಡಿದರೆ ಆ ಆತ್ಮಗಳು ಶಾಂತವಾಗಿ ಅವರು ಬಯಸಿದನ್ನು ಈಡೇರಿಸುತ್ತವೆ ಎಂಬುದು ಅವರ ನಂಬಿಕೆ. ಹೀಗಾಗಿ ಆ ರೀತಿ ಮಾಡುತ್ತಿದ್ದರು. ಆದರೆ ಒಂದು ಕಾಲದಲ್ಲಿ ಅವರು ಆ ರೀತಿ ಮಾಡುವ ಹೊತ್ತಿಗೆ ವುಡ್‍ಲ್ಯಾಂಡ್ ಪ್ರದೇಶದಲ್ಲಿ ಇರುವ ಎಲ್ಲಾ ಮರಗಳು ನಾಣ್ಯಗಳಿಂದ ತುಂಬಿ ಹೋಯಿತು. ಈಗ ಸಹ ಈ ಪ್ರದೇಶದಲ್ಲಿರುವ ಮರಗಳ ಮೇಲೆ ಕೆಲವು ಸಾವಿರ ನಾಣ್ಯಗಳನ್ನು ಕಾಣಬಹುದು.

ಈ ಮರಗಳನ್ನು ಮನಿ ಟ್ರೀ ಎಂದು ಕರೆಯಲಾಗುತ್ತದೆ. ಆದರೆ ಒಂದು ಕಾಲದಲ್ಲಿ ಪೂರ್ವಿಕರು ಪಾಲಿಸಿದ ಆಚಾರವನ್ನು ಈಗಲೂ ಕೆಲವರು ಪಾಲಿಸುತ್ತಿದ್ದಾರೆ. ಇದರಿಂದ ಆ ಮರಗಳ ಮೇಲೆ ಇರುವ ನಾಣ್ಯಗಳ ಸಂಖ್ಯೆ ಇನ್ನಷ್ಟು ಹೆಚ್ಚಿತು. ಪ್ರತಿ ವರ್ಷ ಕ್ರಿಸ್ಮಸ್ ದಿನ ಈ ಮರಗಳ ಮೇಲೆ ಅನೇಕ ಮಂದಿ ನಾಣ್ಯಗಳನ್ನು ಇಟ್ಟು ತಮ್ಮ ಬಯಕೆ ಈಡೇರಬೇಕೆಂದು ಬಯಸುತ್ತಾರೆ. ಹಾಗಾಗಿ ಆ ಮರಗಳನ್ನು ಇನ್ನೂ ಮನಿ ಟ್ರೀ ಎಂದು ಕರೆಯುತ್ತಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions

2018ರ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಮತ ಯಾರಿಗೆ?

Loading ... Loading ...