‘ಜಾಧವ್ ಗೋಮುಖ ವ್ಯಾಘ್ರ, ಅವನಿಗೆ ನಿಯತ್ತೇ ಇಲ್ಲ’ : ಸಿದ್ದರಾಮಯ್ಯ ವಾಗ್ಧಾಳಿ


Wednesday, April 17th, 2019 9:09 pm

ಕಲಬುರ್ಗಿ : ನರೇಂದ್ರ ಮೋದಿಯವರಿಗೆ ಯಾರ ಮೇಲಾದರೂ ಹೆದರಿಕೆ ಇದ್ರೆ ಅದು ಮಲ್ಲಿಕಾರ್ಜುನ ಖರ್ಗೆ ಮೇಲೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಜಿಲ್ಲೆಯ ಅಫಜಲಪುರದಲ್ಲಿ ಪಟ್ಟಣದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಮಲ್ಲಿಕಾರ್ಜುನ ಖರ್ಗೆ ಸತತವಾಗಿ 11 ಬಾರಿ ಚುನಾವಣೆಯಲ್ಲಿ ಆರಿಸಿ ಬಂದವರು. 5 ವರ್ಷ ಸಂಸತ್ ನಲ್ಲಿ ವಿಪಕ್ಷನಾಯಕರಾಗಿ ನರೇಂದ್ರ ಮೋದಿ ವೈಫಲ್ಯ, ಭ್ರಷ್ಟಾಚಾರ ಬಯಲು ಮಾಡುವ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ಹೀಗಾಗಿ ಮೋದಿ. ಅಮಿತ್ ಶಾ ಖರ್ಗೆಯನ್ನು ಸೋಲಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಜಾಧವ್ ಗೋಮುಖ ವ್ಯಾಘ್ರ ಅವನಿಗೆ ನಿಯತ್ತೇ ಇಲ್ಲ, ನಾನು ಅವನಿಗೆ ಎಷ್ಟು ಸಹಾಯ ಮಾಡಿದ್ದೆ. ಬಿಜೆಪಿಗೆ ಯಾವ ಆಮಿಷಕ್ಕೆ ಬಲಿಯಾದನೋ ಗೊತ್ತಿಲ್ಲ ಎಂದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions