ತುಮಕೂರು: ಮಗುವಿನ ಆರೈಕೆ ಮಾಡಲು 500ರೂ. ಲಂಚ ಕೇಳ್ತಾರೆ ಜಿಲ್ಲಾಸ್ಪತ್ರೆ ನರ್ಸ್​ಗಳು


Sunday, March 25th, 2018 1:07 pm


ತುಮಕೂರು: ನಗರದ ಜಿಲ್ಲಾಸ್ಪತ್ರೆಯ ನರ್ಸ್ ಗಳು ಐಸಿಯುನಲ್ಲಿದ್ದ ಮಗುವನ್ನು ಸರಿಯಾಗಿ ಆರೈಕೆ ಮಾಡಲು ಲಂಚಕ್ಕಾಗಿ ಕೈಯೊಡ್ಡಿರುವ ಆರೋಪವೊಂದು ಕೇಳಿಬಂದಿದೆ.

ಶ್ವಾಸಕೋಶದ ತೊಂದರೆಯಿಂದ ನರಳುತಿದ್ದ ಶಿಶುವನ್ನು ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಲಾಗಿತ್ತು. ಮಗುವಿನ ಕೇರ್ ತಗೋಬೇಕಾದರೆ 500 ರೂ. ಕೊಡಬೇಕು ಎಂದು ನರ್ಸ ವಸಂತಾ ಮಗುವಿನ ಪೋಷಕರ ಬಳಿ ಬೇಡಿಕೆ ಇಟ್ಟಿದ್ದಾಳೆ ಎನ್ನಲಾಗಿದೆ.

ಆದ್ರೆ ಮಗುವಿನ ಪೋಷಕರು ಬಡವರಾಗಿದ್ದು, ಹೀಗಾಗಿ ಮಗುವಿನ ತಂದೆ 100 ರೂ. ಕೊಡಲು ಹೋದಾಗ ತಿರಸ್ಕರಿಸಿದ್ದಾರೆ. ಪುಡಿಗಾಸು ನಮಗೆ ಬೇಡಾ…ನಾವೂ ದುಡ್ಡು ನೋಡಿದವರೇ ಎಂದು ಧಮ್ಕಿ ಹಾಕಿದ್ದಾಳೆ. ಬಳಿಕ 200 ರೂ. ಕೊಟ್ಟಾಗ ತೆಗೆದುಕೊಂಡು ಸಹನರ್ಸ್ ಜ್ಯೋತಿಗೂ ಹಂಚಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions