ಬ್ರೇಕಿಂಗ್ ನ್ಯೂಸ್ : ತುಮಕೂರು ಮಾಜಿ ಮೇಯರ್ ಹತ್ಯೆ, ಆರೋಪಿಗಳು ಪೊಲೀಸರಿಗೆ ಶರಣು


Tuesday, October 2nd, 2018 8:46 pm

ಚಿಕ್ಕಬಳ್ಳಾಪುರ: ತುಮಕೂರಿನ ಮಾಜಿ ಮೇಯರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಸರಿಸಲಾಗುತ್ತಿರುವ ಆರೋಪಿಗಳಾದ ರೌಡಿಶೀಟರ್ ಸುಜಯ್ ಭಾರ್ಗವ್ ಅಲಿಯಾಸ್ ಸುಜಿ ಹಾಗೂ ಆತನ ಸಹಚರರು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತುಮಕೂರು ಪೋಲಿಸರ ಎನ್ ಕೌಂಟರ‍್ ಭಯದಿಂದ ಇಂದು ಸಂಜೆ ಶರಣಾಗಿದ್ದಾರೆ.

ಪೊಲೀಸರ ಎನ್‍ಕೌಂಟರ್ ನಿಂದ ತಪ್ಪಿಸಿಕೊಳ್ಳಲು ಸುಜಯ್ ಹಾಗೂ ಆತನ ಸಹಚರರು ತಲೆ ಮರೆಸಿಕೊಂಡಿದ್ದರು. ಅಲ್ಲದೇ ಆರೋಪಿಗಳ ಬಲೆಗೆ ಪೊಲೀಸರು ಮೂರು ವಿಶೇಷ ತಂಡಗಳನ್ನು ಸಹ ರಚನೆ ಮಾಡಿದ್ದು, ಒಂದು ಪೋಲಿಸ್ ತಂಡ ಆಂದ್ರಕ್ಕೂ ತೆರಳಿತ್ತು. ಈ ನಡುವೆ ಗೃಹ ಸಚಿವರ ತವರು ಜಿಲ್ಲೆಯಲ್ಲಿ ಜನಪ್ರತಿನಿಧಿಯೊಬ್ಬರನ್ನು ಕೊಲೆ ಮಾಡಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು, ಇದಲ್ಲದೇ ಖುದ್ದು ಸಿಎಂ, ಗೃಹ ಸಚಿವರು, ತುಮಕೂರು ಪೋಲಿಸ್ ಇಲಾಖೆಗೆ ಆರೋಪಿಗಳ ಹೆಡೆಮುರಿ ಕಟ್ಟ ಬೇಕು ಅಂತ ಆದೇಶ ನೀಡಿದ್ದಾರೆ.

ಕೊಲೆ ನಡೆದು 24 ಗಂಟೆಯಾದ್ರೂ ಆರೋಪಿಗಳನ್ನು ಪತ್ತೆ ಹಚ್ಚಲು ವಿಫಲವಾಗುತ್ತಿದ್ದ ಹಾಗೇ ಎಚ್ಚೆತ್ತು ಕೊಂಡ ಹಿರಿಯ ಪೋಲಿಸ್ ಅಧಿಕಾರಿಗಳು ಕೊಲೆ ಆರೋಪಿಗಳಿಗೆ ಎನ್ ಕೌಂಟರ‍್ ಗುಮ್ಮದ ಸುದ್ದಿಯನ್ನು ಬಿಟ್ಟಿದ್ದಾರೆ ಎನ್ನಲಾಗಿದೆ. ಹೀಗೆ ಜೀವ ಭಯದಿಂದ ಕೊಲೆ ಆರೋಪಿಗಳು ತುಮಕೂರು ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಶರಣಾಗುವರು ಎನ್ನುವ ಮಾತೊಂದು ಕೇಳಿ ಬರುತಿತ್ತು. ಈ ನಡುವೆ ಕೊಲೆ ಆರೋಪಿಗಳು ನ್ಯಾಯಾಲಕ್ಕೆ ಶರಣಾದರೆ ಅಲ್ಲೇ ಬಗ್ಗು ಬಡಿದು ಜೀಪ್ ಹತ್ತಿಸಿಕೊಳ್ಳುವುದಕ್ಕೆ ಸಿದ್ದರಾಗಿದ್ದ ತುಮಕೂರು ಪೋಲಿಸ್ ಸಿಬ್ಬಂದಿಗಳ ಬೋನಿಗೆ ಕೊಲೆ ಆರೋಪಿಗಳು ನಿನ್ನೆ ಬಿಳಲೇ ಇಲ್ಲ.

ಈ ನಡುವೆ ಇಂದು ಸಂಜೆ ಇಂದು ಸುಜಯ್ ಸೇರಿದಂತೆ ಇತರೆ ಆರೋಪಿಗಳು ಸ್ವತಃ ಗೌರಿಬಿದನೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ. ಶರಣಾಗಿರುವ ಆರೋಪಿಗಳನ್ನು ಇಂದು ರಾತ್ರಿ ಸ್ಥಳೀಯ ನ್ಯಾಯಾಧೀಶರ ಮುಂದೆ ಗೌರಿಬಿದನೂರಿನ ಗ್ರಾಮಾಂತರ ಪೊಲೀಸರು ಹಾಜರು ಪಡಿಸಲಿದ್ದು, ಎಲ್ಲಾ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ನಾಳೆ ಸಂಜೆಯೊಳಗೆ ಆರೋಪಿಗಳನ್ನು ತುಮಕೂರು ಜಿಲ್ಲಾ ಪೋಲಿಸರು ಕರೆದುಕೊಂಡು ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಈಗಾಗಲೇ ತುಮಕೂರು ಜಿಲ್ಲಾ ಪೋಲಿಸರು ಚಿಕ್ಕಬಳ್ಳಾಪುರಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions