-->

ತ್ರಯಂಬಕಂ ಸಂಭಾಷಣೆಯಲ್ಲೂ ಸೊಬಗಿದೆ!


Monday, April 15th, 2019 8:13 pm

ಸಿನಿಮಾಡೆಸ್ಕ್: ದಯಾಳ್ ಪದ್ಮನಾಭನ್ ನಿರ್ದೇಶನದ ತ್ರಯಂಬಕಂ ಚಿತ್ರ ಈ ವಾರ ತೆರೆ ಕಾಣುತ್ತಿದೆ. ರಾಘವೇಂದ್ರ ರಾಜ್ ಕುಮಾರ್ ವಿಶೇಷ ಪಾತ್ರವೊಂದರಲ್ಲಿ ನಟಿಸಿರೋ ಈ ಚಿತ್ರದಲ್ಲಿ ರಾಕ್ ಸ್ಟಾರ್ ರೋಹಿತ್ ಮತ್ತು ಅನುಪಮಾ ಗೌಡ ಕೂಡಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ದಯಾಳ್ ಪದ್ಮನಾಭನ್ ಈವರೆಗೆ ಹೇಳಿಕೊಂಡಿರೋ ಒಂದಷ್ಟು ವಿಚಾರಗಳೇ ತ್ರಯಂಬಕಂ ವಿಶಿಷ್ಟವಾದ ಕಥೆ ಹೊಂದಿರುವ ಚಿತ್ರ ಎಂಬುದನ್ನು ಜಾಹೀರು ಮಾಡಿದೆ. ಕನ್ನಡ ಮಾತ್ರವಲ್ಲ, ಪರಭಾಷೆಗಳ ಪಾಲಿಗೂ ಇದೊಂದು ಭಿನ್ನವಾದ ಹೊಸತನದ ಕಥೆಯೇ. ಒಂದು ಕಡೆಯಿಂದ ನೋಡುತ್ತಾ ಹೋದರೆ ತ್ರಯಂಬಕಂ ತುಂಬಾ ಹೊಸತನ ಮತ್ತು ವಿಶೇಷತೆಗಳ ಸರಮಾಲೆಯೇ ಇದೆ. ಅದರಲ್ಲಿ ಸಂಭಾಷಣೆಯೂ ಸೇರಿಕೊಂಡಿದೆ.

ಈ ಚಿತ್ರಕ್ಕೆ ಸಂಭಾಷಣೆ ಬರೆದಿರುವವರು ನವೀನ್ ಕೃಷ್ಣ. ಇದು ನವೀನ್ ಮತ್ತು ದಯಾಳ್ ಅವರ ಕಾಂಬಿನೇಷನ್ನಿನ ಆರನೇ ಚಿತ್ರವಂತೆ. ಈ ಹಿಂದೆಯೂ ನವೀನ್ ಸಂಭಾಷಣಕಾರರಾಗಿ ಗಮನ ಸೆಳೆದಿದ್ದರು. ಆದರೆ ಪೌರಾಣಿಕ ಕಾಲದ ಜೊತೆ ಆಧುನಿಕ ಕಥೆ ಬ್ಲೆಂಡ್ ಆಗಿರೋ ಈ ಚಿತ್ರಕ್ಕೆ ಸಂಭಾಷಣೆ ಬರೆಯೋದು ನವೀನ್ ಪಾಲಿಗೆ ಸವಾಲಾಗಿತ್ತಂತೆ. ಆದರೆ ಅದನ್ನು ಸಮರ್ಥವಾಗಿಯೇ ಮಾಡಿರುವ ಖುಷಿ ನವೀನ್ ಅವರಲ್ಲಿದೆ.

ಹೀಗೆ ಎಲ್ಲ ರೀತಿಯಿಂದಲೂ ಪ್ರೇಕ್ಷಕರ ಗಮನ ಸೆಳೆದಿರೋ ಈ ಚಿತ್ರ ಈ ವಾರ ಅಂದರೆ, ಹತ್ತೊಂಬತ್ತನೇ ತಾರೀಕಿನಂದು ತೆರೆ ಕಾಣಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions