-->

ತ್ರಯಂಬಕಂ ಕಥೆಯ ಹಿಂದಿದೆ ರೋಚಕ ಹುಡುಕಾಟ!


Monday, April 15th, 2019 8:22 pm

ಸಿನಿಮಾಡೆಸ್ಕ್‌‌: ಒಂದು ಸಣ್ಣ ಕಥಾ ಎಳೆ ಸಿಕ್ಕರೆ ಅದರ ಸುತ್ತಾ ಪಾತಾಳ ಗರಡಿ ಹಾಕಿ ಹುಡುಕಾಟ ನಡೆಸುವುದು, ಅಚ್ಚರಿಯ ವಿಚಾರಗಳನ್ನು ಹೆಕ್ಕಿ ತೆಗೆಯುವುದು ನಿರ್ದೇಶಕ ದಯಾಳ್ ಪದ್ಮನಾಭನ್ ಅವರ ಸ್ಪೆಷಾಲಿಟಿ. ಈ ಹಿಂದಿನ ಚಿತ್ರಗಳಿಯೂ ಅವರು ಇಂಥಾದ್ದೇ ಹುಡುಕಾಟ ನಡೆಸಿದ್ದಾರೆ. ಆದರೆ ತ್ರಯಂಬಕಮ್ ಕಥೆ ಅಂಥಾ ಸಾಮಾನ್ಯ ಹುಡುಕಾಟಗಳಿಗೆ ದಕ್ಕುವಂಥಾ ಕಥೆಯಲ್ಲ!

ದಯಾಳ್ ಸಂಭಾಷಣೆಕಾರ ನವೀನ್ ಕೃಷ್ಣ ಅವರಿಗೆ ಮೊದಲು ಕಥಾ ಎಳೆ ಹೇಳಿದಾಗ ಯಾರೇ ಆದರೂ ಅದೊಂದು ಸಿನಿಮಾವಾಗಬಲ್ಲ ವಿಚಾರ ಅಂದುಕೊಳ್ಳಲು ಸಾಧ್ಯವಿರಲಿಲ್ಲವಂತೆ. ಆದರೆ ತಿಂಗಳುಗಳ ಕಾಲ ಪಟ್ಟಾಗಿ ಕೂತ ದಯಾಳ್ ಅವರು ಆ ಕಲಥಾ ಎಳೆಗೆ ಪೂರಕವಾದ ಅಚ್ಚರಿದಾಯಕ ಮಾಹಿತಿಗಳನ್ನು ಕಲೆ ಹಾಕಿದ್ದರು. ಬಳಿಕ ಪುರಾಣ ಕಾಲದ ಆಧುನಿಕ ಕುರುಹುಗಳನ್ನು ಅರಸುತ್ತಾ ಅಲೆದಾಡಿದ್ದರು.

ನವಪಾಶಾಣ ಲಿಂಗ ಈಗೆಲ್ಲಯಾದರೂ ಇದೆಯಾ ಎಂಬ ಹುಡುಕಾಟದಲ್ಲಿಯೂ ಅಚ್ಚರಿಯ ವಿಚಾರಗಳೇ ಎದುರಾಗಿದ್ದವಂತೆ. ಇಂಥಾ ಅದೆಷ್ಟೋ ರೋಚಕ ಮಾಹಿತಿಗಳನ್ನು ಕಲೆ ಹಾಕಿಯೇ ದಯಾಳ್ ಈ ಚಿತ್ರವನ್ನು ರೂಪಿಸಿದ್ದಾರೆ. ಇಂಥಾ ವಿಚಾರಗಳೊಂದಿಗೆ ಆಧುನಿಕ ಕಥೆಯನ್ನು ಬ್ಲೆಂಡ್ ಮಾಡಿ ಅವರು ತ್ರಯಂಬಕಂ ಚಿತ್ರವನ್ನು ರೂಪಿಸಿದ್ದಾರೆ. ಇಂಥಾ ಶ್ರದ್ಧೆಯ ಹುಡುಕಾಟಕ್ಕೆ ಸಕಾರಾತ್ಮಕ ಫಲಿತಾಂಶವೇ ಸಿಗಲಿರೋ ಸೂಚನೆಗಳೂ ದಟ್ಟವಾಗಿವೆ. ಇಂಥಾ ನಿರೀಕ್ಷೆಯ ಒಡ್ಡೋಲಗದಲ್ಲಿ ಈ ಚಿತ್ರ ಈ ವಾರ ತೆರೆ ಕಾಣುತ್ತಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions