-->

ದಯಾಳ್ ಮುಖದಲ್ಲಿ ಮಂದಹಾಸ ಮೂಡಿಸಿದ ತ್ರಯಂಬಕಂ!


Monday, April 15th, 2019 8:17 pm

ಸಿನಿಮಾಡೆಸ್ಕ್: ಶೀರ್ಷಿಕೆಯಲ್ಲಿಯೇ ಎಲ್ಲರನ್ನೂ ಸೆಳೆಯುವಂಥಾ ಮಾಯೆಯನ್ನು ಬಚ್ಚಿಕೊಂಡಿರುವ ಚಿತ್ರ ತ್ರಯಂಬಕಂ. ಈಗಾಗಲೇ ಆ ಕರಾಳ ರಾತ್ರಿ, ಪುಟ ೧೦೯ ಮುಂತಾದ ಚಿತ್ರಗಳ ಮೂಲಕ ವಿಶಿಷ್ಟವಾದ ಕಥೆಯೊಂದಿಗೆ ಪ್ರೇಕ್ಷಕರನ್ನು ತಲುಪಿಕೊಂಡಿದ್ದ ದಯಾಳ್ ಪದ್ಮನಾಭನ್ ಅವರು ಇದೀಗ ತ್ರಯಂಬಕಂ ಮೂಲಕ ಕಮರ್ಶಿಯಲ್ ಹಾದಿಗೂ ಹೆಜ್ಜೆಯಿಟ್ಟಿದ್ದಾರೆ.

ಈ ಹಿಂದಿನ ಚಿತ್ರಗಳಲ್ಲಿ ಕಂಟೆಂಟ್ ಮೇಲಷ್ಟೇ ಗಮನ ಹರಿಸಿದ್ದ ದಯಾಳ್ ಅವರು ಕಲಾತ್ಮಕ ಹಾದಿಯಲ್ಲಿಯೂ ಪ್ರೇಕ್ಷಕರನ್ನು ತಲುಪಿಕೊಂಡಿದ್ದರು. ಈ ಬಾರಿ ವರ್ಷಗಟ್ಟಲೆ ರಿಸರ್ಚ್ ನಡೆಸಿ ಅದ್ಭುತವಾದೊಂದು ಕಥೆಯೊಂದಿಗೆ ಕಮರ್ಶಿಯಲ್ ಆಗಿಯೂ ಗೆಲ್ಲವ ಛಲದೊಂದಿಗೆ ದಯಾಳ್ ಸಾಗಿ ಬಂದಿದ್ದಾರೆ. ಬಿಡುಗಡೆ ಪೂರ್ವದಲ್ಲಿಯೇ ಸಕಾರಾತ್ಮಕ ಪ್ರತಿಕ್ರಿಯೆಗಳೂ ಸಿಕ್ಕಿವೆ.

ಇದೀಗ ತ್ರಯಂಬಕಂ ಚಿತ್ರದ ವಿತರಣಾ ಹಕ್ಕನ್ನು ಜಾಕ್ ಮಂಜುನಾಥ್ ಅವರು ಖರೀದಿಸಿದ್ದಾರೆ. ಒಂದೊಳ್ಳೆ ಬೆಲೆಗೇ ಈ ವ್ಯವಹಾರ ಕುದುರಿಕೊಂಡಿದೆ. ಇದರಿಂದಾಗಿಯೇ ಹಣ ಹೂಡಿದ ನಿರ್ಮಾಪಕರೂ ನಿರಾಳರಾಗಿದ್ದಾರೆ. ಈಗಾಗಲೇ ಹೂಡಿರೋ ಹಣದಲ್ಲಿ ಅರ್ಧದಷ್ಟು ವಾಪಾಸಾಗಿದೆ. ಈಗ ಟ್ರೈಲರ್ ಮೂಲಕವೇ ಹರಡಿಕೊಂಡಿರೋ ಅಲೆಯೇ ಜನರನ್ನು ಥೇಟರಿಗೆ ಕರೆತರೋದರಲ್ಲಿಯೂ ಅನುಮಾನವೇನಿಲ್ಲ.

ಇಂಥಾ ಸಕಾರಾತ್ಮಕವಾದ ವಾತಾವರಣದಿಂದಲೇ ನಿರ್ದೇಶಕ ದಯಾಳ್ ಅವರ ಭರವಸೆ ಮತ್ತಷ್ಟು ಹೆಚ್ಚಾಗಿದೆ. ಈ ವಾರವೇ ತ್ರಯಂಬಕಂ ಪ್ರೇಕ್ಷಕರೆದುರು ಬರಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions