‘ಪ್ರೇಮಿಗಳ ದಿನ’ಕ್ಕೆ ಕೇಂದ್ರ ಸರ್ಕಾರ ರಜೆ ಘೋಷಿಸಲಿ: ವಾಟಾಳ್ ನಾಗರಾಜ್ ಆಗ್ರಹ


Wednesday, February 14th, 2018 3:22 pm

ಬೆಂಗಳೂರು: ಪ್ರೇಮಿಗಳ ದಿನದಂದು ಕೇಂದ್ರ ಸರ್ಕಾರ ಒಂದು ದಿನದ ರಜೆ ಘೋಷಿಸಬೇಕು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅವರು ಇಂದು ಬೆಂಗಳೂರಿನಲ್ಲಿರುವ ಕಬ್ಬನ್ ಪಾರ್‍ಕಿನಲ್ಲಿ  ಕುರಿಗಳ ಮದುವೆ ಮಾಡುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಿ ಮಾಧ್ಯಮಗಳ ಜೊತೆ ಮಾತನಾಡಿದರು.

ಇದೇ ವೇಳೆ ಅವರು ಮಾತನಾಡುತ್ತ ಪ್ರೀತಿಸಿ ಮದುವೆಯಾಗುವ ಜೋಡಿಗೆ ರಾಜ್ಯ ಸರ್ಕಾರ ₹50 ಸಾವಿರದಿಂದ ₹1 ಲಕ್ಷ ಪ್ರೋತ್ಸಾಹ ಧನ ನೀಡಲಿ ಇದಲ್ಲದೇ , ಪ್ರೇಮಿಗಳ ದಿನದಂದು ಕೇಂದ್ರ ಸರ್ಕಾರ ಒಂದು ದಿನದ ರಜೆ ಘೋಷಿಸಬೇಕು ಎಂದು ಹೇಳಿದರು. ಇನ್ನು  ಪ್ರೀತಿಗೆ ಯಾವುದೇ ಜಾತಿ ಅಥವಾ ಸಮುದಾಯಗಳಿಲ್ಲ, ಪ್ರೇಮಿಗಳ ದಿನಕ್ಕೆ ನಾವು ವಿರೋಧಿಸಬಾರದು. ಪ್ರೀತಿಸಿ ಮದುವೆ ಆಗುವ ಜೋಡಿಗೆ ರಾಜ್ಯ ಸರ್ಕಾರ ₹50 ಸಾವಿರದಿಂದ ₹1ಲಕ್ಷ ಪ್ರೋತ್ಸಾಹ ಧನ ನೀಡಬೇಕು ಎಂದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions

2018ರ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಮತ ಯಾರಿಗೆ?

Loading ... Loading ...