ಮಾ. 3 ರಿಂದ ಕರಾವಳಿ ಭಾಗದಲ್ಲಿ ಸುರಕ್ಷಾ ಯಾತ್ರೆ : ಶೋಭಾ ಕರಂದ್ಲಾಜೆ


Wednesday, February 14th, 2018 5:38 pm

ಬೆಂಗಳೂರು : ರಾಜ್ಯದ ಕರಾವಳಿ ಭಾಗದಲ್ಲಿ ಶಾಂತಿ ಸುರಕ್ಷತೆಯನ್ನು ಪ್ರತಿಪಾದಿಸುವ ಸುರಕ್ಷಾ ಯಾತ್ರೆಯನ್ನು ಮಾರ್ಚ್ 3 ರಿಂದ 6 ರ ವರೆಗೆ ಬಿಜೆಪಿ ನಡೆಸಲಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ಇತ್ತೀಚಿಗೆ ನಡೆದ ಗಲಭೆಗಳು, ಹತ್ಯೆಗಳಿಂದ ಅಲ್ಲಿನ ಜನ ಅದರಲ್ಲೂ ಯುವಕರು ಭಯಭೀತರಾಗಿದ್ದಾರೆ. ಎಲ್ಲರಲ್ಲೂ ಸುರಕ್ಷತೆಯ ಭಾವನೆ ತುಂಬುವ ಯಾತ್ರೆ ಇದಾಗಿದ್ದು, ಮಡಕೇರಿ ಹಾಗೂ ಅಂಕೋಲದಲ್ಲಿ ಏಕಕಾಲದಲ್ಲಿ ಈ ತಲಾ ಒಂದು ತಂಡಗಳ ಯಾತ್ರೆ ಆರಂಭವಾಗಲಿದೆ ಎಂದು ಹೇಳಿದರು.

ಮಾರ್ಚ್ 3 ರಂದು ಮಡಿಕೇರಿಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಒಂದು ತಂಡದ ಯಾತ್ರೆಯನ್ನು ಉದ್ಘಾಟಿಸಿದ್ದಾರೆ. ಅಂಕೋಲದಲ್ಲಿ ಅದೇ ದಿನ ಕೇಂದ್ರ ಸಚಿವ ಅನಂತ್ ಕುಮಾರ್ ಹಾಗೂ ಅನಂತ್ ಕುಮಾರ್ ಹೆಗಡೆ ಇಬ್ಬರೂ ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions